ಮೊಬೈಲ್ ಕೊಡಿಸದಿದ್ದಕ್ಕೆ ಬೇಸರ; ಯುವಕ ಆತ್ಮಹತ್ಯೆ
ಚಿತ್ರದುರ್ಗ; ಮೊಬೈಲ್ ಕಳೆದುಕೊಂಡಿದ್ದ ಯುವಕನಿಗೆ ಅಜ್ಜ ಇನ್ನೊಂದು ಮೊಬೈಲ್ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ರದುರ್ಗ ಬಳಿಯ ಕೊಳಾಳ್ ಗ್ರಾಮದ ಯಶವಂತ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ
ಹೊಳಲ್ಕೆರೆ ತಾಲ್ಲೂಕಿನಲ್ಲಿ ಈ ಕೊಳಾಳ್ ಗ್ರಾಮದ ಯಶವಂತ್, ಅಕ್ಟೋಬರ್ 8 ರಂದು ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ. ಈ ವೇಳೆ ಆತನ ಮೊಬೈಲ್ ಕಳೆದುಹೋಗಿತ್ತು. ಹೀಗಾಗಿ, ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಕೇಳಿದ್ದ. ಆದ್ರೆ ಸದ್ಯಕ್ಕೆ ನನ್ನ ಬಳಿ ಹಣ ಇಲ್ಲ. ಈರುಳ್ಳಿ ಬೆಳೆ ಬಂದ ಮೇಲೆ ಮೊಬೈಲ್ ಕೊಡಿಸುತ್ತೇನೆ ಎಂದು ಅಜ್ಜ ಹೇಳಿದ್ದರು.
ಇದ್ರಿಂದ ಮನನೊಂದಿದ್ದ ಯುವಕ ಯಶವಂತ್ ಅಕ್ಟೋಬರ್ 18ರಂದು ಮನೆಯಲ್ಲಿ ರಸಾಯನಿಕ ಸೇವಿಸಿದ್ದ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.