DistrictsPolitics

ಮದುವೆ ಮಂಟಪದಿಂದ ಬಂದು ಮತ ಚಲಾಯಿಸಿದ ವಧು

ಚಿಕ್ಕಮಗಳೂರು; ಈ ಬಾರಿ ಮತದಾರರು ಮತದಾನ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ವೃದ್ಧರು, ಅಂಗವಿಕಲರು ಸೇರಿ ಎಲ್ಲರೂ ಮತಗಟ್ಟೆಗೆ ಬಂದು ವೋಟ್‌ ಮಾಡುತ್ತಿದ್ದಾರೆ. ಬೆಳಗ್ಗೆಯಿಂದಲೇ ಎಲ್ಲಾ ಮತಗಟ್ಟೆಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದಾರೆ. ಸ್ವಯಂ ಪ್ರೇರಿತವಾಗಿ ಈ ಬಾರಿ ಮತದಾನ ಮಾಡಲಾಗುತ್ತಿದೆ.

ಇತ್ತ ಚಿಕ್ಕಮಗಳೂರಲ್ಲಿ ಮದುವೆಯಾಗುತ್ತಿರುವ ವಧುವೊಬ್ಬರು ತಮ್ಮ ಹಕ್ಕನ್ನು ಚಲಾಯಿಸುವುದನ್ನು ಮರೆತಿಲ್ಲ. ಮದುವೆ ಮಂಟಪದಿಂದ ಬಂದ ವಧು ತಮ್ಮ ಹಕ್ಕನ್ನು ಚಲಾಯಿಸಿ ಹೋಗಿದ್ದಾರೆ.

Share Post