Districts

ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್; ಮೈಲಾರ ಕಾರ್ಣಿಕ

ವಿಜಯನಗರ; ಅಂಬಲಿ ಅಳಸಿತು ಕಂಬಳಿ ಬೀಸಿತಲೇ ಪರಾಕ್. ಇದು ಮೈಲಾರ ಲಿಂಗೇಶ್ವರನ ಗೊರವಯ್ಯನ ಕಾರ್ಣಿಕ ಇದರ ಅರ್ಥವೇನು..? ಹೂವಿನ ಹಡಗಲಿ ತಾಲ್ಲೂಕಿನ ಪ್ರಸಿದ್ದ ಮೈಲಾರ ಲಿಂಗೇಶ್ವರ ದೇವಾಲಯದ ಕಾರ್ಣಿಕ ಮಹೋತ್ಸವ ಜರುಗಿತು.

ಮಹೋತ್ಸವದಲ್ಲಿ ಸುಮಾರು 30 ಅಡಿ ಎತ್ತರದ ಬಿಲ್ಲನ್ನ ಏರಿದ ಗೊರವಯ್ಯ “ಅಂಬಲಿ ಹಳಸಿತು, ಕಂಬಳಿ ಬೀಸಿತಲೇ” ಪರಾಕ್ ಎಂದು ಕಾರ್ಣಿಕ ನುಡಿದರು.

ಈ ವರ್ಷದ ಕಾರ್ಣಿಕ ನುಡಿಯನ್ನ ಭಕ್ತರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗಲಿದ್ದು, ನಾಡು ಸುಭಿಕ್ಷವಾಗಿರಲಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ದೇಶದಲ್ಲಿ ಉತ್ತಮ ನಾಯಕ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಕಾರ್ಣಿಕ ನುಡಿಯನ್ನ ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಿದ್ದಾರೆ.

Share Post