CrimeDistricts

ಶ್ರೀನಿವಾಸ ಸಾಗರ ಜಲಾಶಯ ನೋಡಲು ಬಂದಿದ್ದ ವಿದ್ಯಾರ್ಥಿನಿ ಸಾವು..!

ಚಿಕ್ಕಬಳ್ಳಾಪುರ; ಶ್ರೀನಿವಾಸ ಸಾಗರ ಜಲಾಶಯ ನೋಡಲು ಬೆಂಗಳೂರಿನಿಂದ ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬಳು ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.  ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸೇತುವೆಯ ಕೆಳ ಭಾಗದಲ್ಲಿ  ಈ ದುರ್ಘಟನೆ ನಡೆದಿದೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಚೈತ್ರಾ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಎಂಇಎಸ್ ಕಾಲೇಜಿನ ತನ್ನ ಸ್ನೇಹಿತ ಲಿಖಿತ್ ಗೌಡ ಜೊತೆ ಹೊಂಡಾ ಆಕ್ಸೆಸ್ ಗಾಡಿಯಲ್ಲಿ ಚೈತ್ರಾ ಬಂದಿದ್ದರು. ಶ್ರೀನಿವಾಸ ಸಾಗರ ಜಲಾಶಯ ನೋಡಿಕೊಂಡು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

ವಾಪಸಂದ್ರದ ಸೇತುವೆ ಕೆಳಗಿಂದ ರಾಷ್ಟ್ರೀಯ ಹೆದ್ದಾರಿ ಕಡೆ ಬರುವಾಗ ಬಾಗೇಪಲ್ಲಿ ಕಡೆಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಚೈತ್ರಾ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಚೈತ್ರಾ ಕಳೆಗೆ ಬಿದ್ದಿದ್ದು, ಆಕೆಯ ಮೇಲೆ ಟಿಪ್ಪರ್‌ ಹರಿದಿದೆ. ಚೈತ್ರ ದೇಹ ನಜ್ಜುಗುಜ್ಜಾಗಿದೆ. ಸ್ಕೂಟರ್‌ ಚಾಲನೆ ಮಾಡುತ್ತಿದ್ದ ಚೈತ್ರ ಸ್ನೇಹಿತ ಲಿಖಿತ್‌ ಗೌಡ ಕಾಲಿಗೆ ಗಾಯವಾಗಿದೆ.

 

Share Post