Districts

ಕೊಡಗು-ದಕ್ಷಿಣ ಕನ್ನಡದಲ್ಲಿ ಮತ್ತೆ ಕಂಪಿಸಿದ ಭೂಮಿ

ಮಂಗಳೂರು; ಎರಡು ತಿಂಗಳ ಹಿಂದೆ ದಕ್ಷಿಣ ಕನ್ನಡ, ಹಾಸನ, ಕೊಡಗು ಭಾಗದಲ್ಲಿ ಮೂರು ನಾಲ್ಕು ಬಾರಿ ಭೂಮಿ ಕಂಪಿಸಿತ್ತು. ಇದೀಗ ಮತ್ತೆ ಅದೇ ರೀತಿಯ ಅನುಭವವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಗಳ ಕೆಲ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಭಾನುವಾರ ಸಂಜೆಯೂ ಭೂಮಿ ಕಂಪಿಸಿತ್ತು. ಇಂದು ಮತ್ತೆ ಕೆಲವು ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಅಲ್ಲಿನ ಜನರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕಲ್ಮಕಾರು ಹಾಗೂ ಕಲ್ಲುಗುಂಡಿ ಭಾಗದಲ್ಲಿ ಭೂಮಿ ಕಂಪಿಸಿದೆ. ಕಲ್ಮಕಾರು ಭಾಗದಲ್ಲಿ ದೊಡ್ಡ ಶಬ್ದ ಕೇಳಿಸಿದೆ. ಇದೇ ವೇಳೆ ಭೂಮಿ ಕೂಡಾ ನಡುಗಿದೆ. ತಾಲೂಕಿನ ಕಲ್ಮಕಾರು, ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ಉಂಟಾದ ಶಬ್ದ ಕೊಲ್ಲಮೊಗ್ರದವರೆಗೆ ಕೇಳಿರುವುದಾಗಿ ತಿಳಿದು ಬಂದಿದೆ.

ಇತ್ತೀಚೆಗೆ ಕಲ್ಮಕಾರು ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಇದೀಗ ಅದೇ ಭಾಗದಲ್ಲಿ ಭೂಮಿ ನಡುಗಿದ್ದು, ಅಲ್ಲಿನ ಜನರಲ್ಲಿ ಭೀತಿ ಉಂಟು ಮಾಡಿದೆ.

Share Post