ಶಿವಮೊಗ್ಗದಲ್ಲಿ 83 ಜನರಿಗೆ ಕೊರೋನಾ
ಶಿವಮೊಗ್ಗ :ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಜೋರಾಗಿದೆ. ತಮಿಳುನಾಡಿನ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದ 83 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಡಿಸೆಂಬರ್ ೩೧ ರಂದು ಭಕ್ತರು ಓಂ ಶಕ್ತಿ ದೇವಾಲಯಕ್ಕೆ ಹೋಗಿದ್ದರು. ಅಲ್ಲಿಗೆ ನಾನಾ ಕಡೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಯಾತ್ರೆ ಮುಗಿಸಿಕೊಂಡು ಬಂದಿದವರಿಗೆ ಕೊರೋನಾ ದೃಡಪಟ್ಟಿದೆ. ಇದ್ದರಿಂದ ಜನರಿಗೆ ಕೊರೋನಾ ಆತಂಕ ಸೃಷ್ಟಿಯಾಗಿದೆ.ಶನಿವಾರದವರೆಗೆ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದಿದ್ದ 20 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ನಿನ್ನೆ ಮತ್ತೆ 63 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು,
ಈವರೆಗೆ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದ 83 ಜನರಲ್ಲಿ ಕಾಣಿಸಿಕೊಂಡ ಕೋವಿಡ್ ದೃಡಪಟ್ಟಿದೆ. ಇನ್ನು ಶಿವಮೊಗ್ಗದ ಜೊತೆಗೆ ಶಿಕಾರಿಪುರ, ಭದ್ರಾವತಿ, ಹೊಸನಗರ ತಾಲೂಕಿಗೂ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲೆಯಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 442ಕ್ಕೆ ಏರಿಕೆ ಕಂಡಿದೆ.
ಇತ್ತ, ಕೋಲಾರ ಜಿಲ್ಲೆಯಲ್ಲೂ ಕೊರೋನಾ ಹಾವಳಿ ಮುಂದುವರೆದಿದೆ. ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಒಬ್ಬರು ಅಡುಗೆ ಭಟ್ ರಿಗೆ ಸೇರಿದಂತೆ 9 ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
150 ಮಕ್ಕಳಿರುವ ವಸತಿ ಶಾಲೆಯಲ್ಲಿ 29 ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಲಾಗಿತ್ತು. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿತರ ವಿದ್ಯಾರ್ಥಿ ನಿಲಯದಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಇಂದು ಸಹ ಮತ್ತಷ್ಟು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.