Districts

ಶಿರಾಡಿ ಘಾಟ್‍ ರಸ್ತೆಯನ್ನು ನಾಲ್ಕು ಪಥದ ಹೆದ್ದಾರಿಯಾಗಿ ಪರಿವರ್ತಿಸಲು ಆದ್ಯತೆ: ನಿತಿನ್ ಗಡ್ಕರಿ

ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ 26 ಕಿ.ಮೀ. ಉದ್ದದ ಶಿರಾಡಿ ಘಾಟ್‍ ಅನ್ನುನಾಲ್ಕು ಪಥದ ಹೆದ್ದಾರಿಯಾಗಿ ಪರಿವರ್ತಿಸಲು ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ  ಹೇಳಿದರು. ಸೋಮವಾರ ನಗರದ ಕುಲಶೇಖರದಲ್ಲಿ ಕೇಂದ್ರ ರಸ್ತೆ-ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ) ಮತ್ತು ಲೋಕೋಪಯೋಗಿ ಇಲಾಖೆಯಿಂದ
3,163.47 ಕೋಟಿ ರು. ವೆಚ್ಚದ 164.22 ಕಿ.ಮೀ. ದೂರದ 15 ವಿವಿಧ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ
ಬಳಿಕ ಈ ವಿಚಾರವನ್ನು ಹೇಳಿದ್ರು.

ಸುಮಾರು 14 ಸಾವಿರ ಕೋಟಿ ರು. ವೆಚ್ಚದಲ್ಲಿ ಶಿರಾಡಿ ಘಾಟ್ ನಾಲ್ಕು ಪಥದ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಪರಿಸರ ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ದೊರಕಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ಶಿರಾಡಿ ಘಾಟ್‍ನಲ್ಲಿ ಸುರಂಗ ಮಾರ್ಗ ರಚನೆಗೂ ಉದ್ದೇಶಿಸಲಾಗಿದ್ದು, ಇದು 7 ಸುರಂಗ ಹಾಗೂ 6 ಸೇತುವೆಯನ್ನು ಒಳಗೊಳ್ಳಲಿದೆ. ಇಲ್ಲಿ ಕೂಡ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಸಿಕ್ಕಿದರೆ ಕಾರ್ಯಸಾಧ್ಯತಾ ವರದಿ
ತಯಾರಿಗೆ ಸೂಚನೆ ನೀಡಲಾಗುವುದು. ಈ ಕಾಮಗಾರಿಗಳು ಪೂರ್ಣಗೊಂಡರೆ ಚೆನ್ನೈ-ಮಂಗಳೂರು ಬಂದರು ಸಂಪರ್ಕ ಸುಲಭವಾಗಲಿದ್ದು, ಇದು ಕರಾವಳಿ ಭಾಗದ ಜೀವನಾಡಿಯಾಗಲಿದೆ ಎಂಬ ವಿಶ್ವಾಸವನ್ನು ಹೊರಹಾಕಿದ್ರು.

ವರ್ತುಲ ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಸಿಮೆಂಟ್ ಮತ್ತು ಕಬ್ಬಿಣ ಮೇಲಿನ ಜಿಎಸ್‍ಟಿ ಕಡಿತಗೊಳಿಸುವಂತೆ ಜಿಎಸ್‍ಟಿ ಮಂಡಳಿಯನ್ನು ಕೋರಲಾಗಿದೆ. ಇದರಲ್ಲಿ ವಿನಾಯ್ತಿ ಸಿಕ್ಕಿದರೆ ರಿಂಗ್ ರಸ್ತೆ ನಿರ್ಮಾಣ ಸುಲಭವಾಗಲಿದೆ ಎಂಬ ಮಾತನ್ನು ಹೇಳಿದ್ದಾರೆ.

Share Post