ಯುವ ಜನೋತ್ಸವಕ್ಕೆ ಭರ್ಜರಿ ತಯಾರಿ; ಮಾಹಿತಿ ನೀಡಿದ ಜಿಲ್ಲಾಧಿಕಾರಿ
ಧಾರವಾಡ; ಧಾರವಾಡದಲ್ಲಿ ನಾಳೆ 12 ರಿಂದ 16 ರ ವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾಧ್ಯಮಗೋಷ್ಠಿ ನಡೆಸಿದರು.
ಯುವಜನೋತ್ಸವದ ತಯಾರಿ ಬಗ್ಗೆ ಮಾತನಾಡಿದ ಅವರು, ಭದ್ರತೆ ಸೇರಿ, ಆಹಾರ ಹಾಗೂ ಮಾರ್ಗಗಳ ಬದಲಾವಣೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಒಳಗೆ ಎಲ್ಲ ಕಾರ್ಯ ಮುಗಿಯಲಿವೆ. ಪ್ರಧಾನಿ ಕಾರ್ಯಕ್ರಮ ಹಿನ್ನೆಲೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ 25 ಸಾವಿರ ಜನರು ಅಷ್ಟೇ ಸೇರಲು ಅವಕಾಶ ಇದೆ. ಹೀಗಾಗಿ ಎರಡು ಮೈದಾನದಲ್ಲಿ ವಿಶೇಷ ಎಲ್ ಇ ಡಿ ವ್ಯವಸ್ಥೆ ಮಾಡಲಾಗಿದೆ. ಬಂದಿರೋ ಯುವಕರಿಗೆ ನಾಳೆ ಧಾರವಾಡದ ಬಗ್ಗೆ ಒಂದು ಕಿರುನುಡಿ ಚಿತ್ರ ತೋರಿಸುವ ಪ್ಲಾನ್ ಮಾಡಿದ್ದೇವೆ ಎಂದರು.
ವಿನೂತನ ರೀತಿಯಲ್ಲಿ ಜನರಿಗೆ ಅರಿವು ಮೂಡಿಸುವ ಯತ್ನ ಆಗಲಿದೆ. ಎಂಜೆ 5 ಡ್ಯಾನ್ಸ್ ತಂಡ ಸೇರಿ, ವಿಜಯ್ ಪ್ರಕಾಶ್ ರಂತಹ ಹಲವು ಗಾಯಕರು ಧಾರವಾಡದ ಕೆಸಿಡಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬರ್ತಾರೆ. 4 ಗಂಟೆಗೆ ಹುಬ್ಬಳ್ಳಿಯಲ್ಲಿ ಪ್ರಧಾನಿಯಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. 5.30ಕ್ಕೆ ಪ್ರಧಾನಿ ವಾಪಸ್ ಮರಳಲಿದ್ದಾರೆ ಎಂದರು.
ನಂತರ ಹುಬ್ಬಳ್ಳಿಯಲ್ಲಿ 5 ಕಡೆಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ ಬಗ್ಗೆ ಮಾತನಾಡಿದ ಅವರು ಅಧಿಕೃತವಾಗಿ ರೋಡ್ ಶೋ ಬಗ್ಗೆ ಮಾಹಿತಿ ಇಲ್ಲ. ಪ್ರಧಾನಿ ಕಚೇರಿಯಿಂದ ನಮಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ದೊರಕಿಲ್ಲ. ಧಾರವಾಡದಲ್ಲಿ 80 ಸ್ಟಾಲ್ ಗಳಲ್ಲಿ ಆಹಾರ ಮೇಳ ಮಾಡಲಾಗುತ್ತೆ, ಬೇರೆ ಬೇರೆ ತಂಡಗಳು ಭಾಗಿಯಾಗ್ತವೆ ಎಂದರು.