BengaluruDistricts

ಮೈಸೂರು ದಸರಾ ಉತ್ಸವಕ್ಕೆ ಹೊಸ ಲುಕ್‌ ನೀಡಬೇಕಿದೆ; ಡಿ.ಕೆ.ಶಿವಕುಮಾರ್‌

ಮೈಸೂರು; ಮೈಸೂರು ದಸರಾ ಉತ್ಸವಕ್ಕೆ ಹೊಸ ಲುಕ್‌ ನೀಡಬೇಕಿದ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಅವರು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಮುಂದಿನ ದಿನಗಳಲ್ಲಿ ಮೈಸೂರು ದಸರಾ ಉತ್ಸವದ ಥೀಮ್ ಬದಲಾಗಬೇಕು. ಸ್ತಬ್ಧ ಚಿತ್ರಗಳ ಪ್ರದರ್ಶನದ ಬಗ್ಗೆ ಪ್ರತಿ ಜಿಲ್ಲೆಯಲ್ಲೂ ಸ್ಪರ್ಧೆ ನಡೆಯಬೇಕು. 400 ವರ್ಷಗಳ ಇತಿಹಾಸ ವಿರುವ ಮೈಸೂರು ದಸರಾ ಉತ್ಸವಕ್ಕೆ ನ್ಯೂ ಲುಕ್ ನೀಡಬೇಕಿದೆ ಎಂದು ಡಿಕೆಶಿ ಹೇಳಿದರು.

ಹೊಸ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡಬೇಕು. ಮೈಸೂರಿಗೆ ಬರುವ ಅತಿಥಿಗಳಿಗೆ ವಿಶೇಷ ವ್ಯವಸ್ಥೆಗಳನ್ನು ಒದಗಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ದಸರಾವನ್ನು ಮೈಸೂರಿಗೆ ಮಾತ್ರ ಸೀಮಿತಗೊಳಿಸದೆ, ರಾಜ್ಯಮಟ್ಟದ ಅಧಿಕಾರಿಗಳನ್ನು ದಸರಾ ಉತ್ಸವಕ್ಕೆ ಬಳಸಿಕೊಳ್ಳಬೇಕು ಏಂದೂ ಡಿಕೆಶಿ ಹೇಳಿದರು.

 

Share Post