ನಾನು ಇಲ್ಲಿ ಆಟ ಆಡೋಕ್ಕೆ ಬಂದಿಲ್ಲ ಮೇಡಂ..!
ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೋವಿಡ್ ಕೇರ್ ಕೇಂದ್ರಕ್ಕೆ ಸಚಿವ ನಾರಾಯಣಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಂಕಿತ ಬಳಿ ಹೋಗಿ ಸಚಿವರು ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ
ಕೋವಿಡ್ ಸೋಂಕಿತರಿಗೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಯಲ್ಲಿ ಸಚಿವ ನಾರಾಯಣಗೌಡರು ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾಗೆ ತರಾಟೆ ತೆಗೆದುಕೊಂಡರು.
ನಾನು ಇಲ್ಲಿ ಆಟ ಆಡೋಕ್ಕೆ ಬಂದಿಲ್ಲ ಮೇಡಂ ಎಂದು ಏರುಧ್ವನಿಯಲ್ಲಿ ಹೇಳಿದ್ದರು. ಈ ವೇಳೆ ತಹಶೀಲ್ದಾರ್ ಶ್ವೇತಾ ಸಪೋರ್ಟ್ ಮಾಡೋದಕ್ಕೆ ಮುಂದಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ. ಶ್ರೀಧರ್ ತರಾಟೆ ತೆಗೆದುಕೊಂಡರು. ಸಪೋರ್ಟ್ ಮಾಡೋದಾದ್ರೆ, ಅವರ ಮನೆಯಲ್ಲಿ ಮಾಡಿ. ಅವರು ಮಾಡ್ತಿರುವ ತಪ್ಪನ್ನು ನಾನು ಹೇಳ್ತಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ನಾರಾಯಣಗೌಡ ತರಾಟೆಗೆ ಅಲ್ಲಿದ ಅಧಿಕಾರಿಗಳು, ತಹಶೀಲ್ದಾರ್ ತಬ್ಬಿಬ್ಬಾಗಿದ್ದಾರೆ. ಇಂತವರನ್ನು ಇನ್ಪ್ಲೂಯೆನ್ಸ್ ಮಾಡಿ ಹಾಕಿಸಿಕೊಂಡು ನಮಗೆ ಕೆಟ್ಟ ಹೆಸ್ರು ತರ್ತಿರಾ?.. ಊಟ ಪುಕ್ಸಟ್ಟೆ ಏನಾದ್ರೂ ಕೊಡ್ತಿದ್ದೀರಾ.? ದುಡ್ಡು ಕೊಡ್ತಿಲ್ವಾ ಸರ್ಕಾರ.? ತಟ್ಟೆ ಕೊಡದೆ, ಪ್ಲಾಸ್ಟಿಕ್ ಕವರ್ ನಲ್ಲಿ ಊಟ ಕೊಟ್ಟರೆ ಹೇಗೆ ತಿಂತಾರೆ.? ಇದುವರೆಗೆ ಬಕೆಟ್ ಕೊಟ್ಟಿಲ್ಲ, ಒಂದೇ ಒಂದು ಶೌಚಾಲಯ ಕೊಟ್ಟಿದ್ದಾರೆ..
ನಾನು ಬಂದಿರುವುದಕ್ಕೆ ಇವರು ಬಂದಿದ್ದಾರೆ. ದಿಸ್ ಇಸ್ ಟೂ ಮಚ್, ರಜಾ ಹಾಕಿ ನೀವು. ಹೋಗಿ ನಾಳೆಯಿಂದ ಯಾರನ್ನಾದ್ರೂ ಡ್ಯೂಟಿಗೆ ಹಾಕ್ತಿನಿ.ಇವರ ಕೈನಲ್ಲಿ ಹಾಗಲ್ಲ, ಮೇಂಟೈನ್ ಮಾಡೋಕೆ..
ತಹಶೀಲ್ದಾರ್ ಶ್ವೇತಾ ರವೀಂದ್ರ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.