ಗೌನಿಪಲ್ಲಿ ಠಾಣೆಯಲ್ಲಿ ಮದ್ಯ ಸೇವನೆ; ಮೂವರು ಪೇದೆಗಳ ಅಮಾನತು
ಕೋಲಾರ; ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಠಾಣೆಯಲ್ಲಿ ಸಿಬ್ಬಂದಿ ಮದ್ಯ ಸೇವನೆ ಮಾಡಿದ್ದರು. ಈ ಪ್ರಕರಣ ಸಂಬಂಧ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಮದ್ಯ ಸೇವಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾನ್ಸ್ಟೇಬಲ್ಗಳಾದ ಚಲಪತಿ, ಮಂಜುನಾಥ್ ಹಾಗೂ ವಿಡಿಯೋ ಮಾಡಿದ್ದ ಸಿಬ್ಬಂದಿ ರಮೇಶ್ ಬಾಬು ಕೂಡ ಅಮಾನತುಗೊಂಡಿದ್ದಾರೆ. ಹಳೆಯ ವಿಡಿಯೋ ಮತ್ತೆ ವೈರಲ್ ಆದ ಹಿನ್ನೆಲೆ ಪ್ರಕರಣ ತನಿಖೆಗೆ ಸೂಚನೆ ನೀಡಿದ್ದಾರೆ.