ಉಪತಹಸೀಲ್ದಾರ್ ನಿವಾಸದಲ್ಲಿ 5 ಬೆಳ್ಳಿ, 450 ಗ್ರಾಮ್ ಚಿನ್ನ ಪತ್ತೆ
ಗದಗ: ಬೆಳಗ್ಗೆಯಿಂದ ಎಸಿಬಿ ಅಧಿಕಾರಿಗಳು ಹಲವು ಅಧಿಕಾರಿಗಳ ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಗದಗದ ಉಪತಹಸೀಲ್ದಾರ್ ಮನೆಯಲ್ಲಿ ಅರ್ಧ ಕೆಜಿ ಚಿನ್ನ ಹಾಗೂ ಐದು ಕೆಜಿ ಬೆಳ್ಳಿ ಪತ್ತೆಯಾಗಿದೆ. ಗದಗ ನಗರದ ಪಂಚಾಕ್ಷರಿ ಬಡಾವಣೆಯಲ್ಲಿರುವ ಉಪತಹಶೀಲ್ದಾರ್ ಬಿ.ಎಸ್.ಅಣ್ಣಿಗೇರಿ ಮನೆ ಮೇಲೆ ಎಸಿಬಿ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ.
450 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಹಾಗೂ ಅಂದಾಜು 25 ಎಕರೆ ಜಮೀನು, 12 ಸೈಟ್ ಗಳ ದಾಖಲೆಗಳು ಪತ್ತೆಯಾಗಿವೆ. 1.50 ಲಕ್ಷ ನಗದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಿ.ಎಸ್ ಅಣ್ಣಿಗೇರಿ ಅವರ ತಾಯಿ ವಾಸವಿದ್ದ ನೆಲಮಹಡಿ ಮನೆಯಲ್ಲಿ ದಾಖಲೆಗಳು ಪತ್ತೆಯಾಗಿವೆ.