Districts

ಹಳಿ ತಪ್ಪಿದ ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು

ಕೊಪ್ಪಳ; ಕೊಪ್ಪಳ ಜಿಲ್ಲೆ ಕಾರಟಗಿ ಬಳಿ ರೈಲೊಂದು ಹಳಿ ತಪ್ಪಿದೆ. ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು, ಇದರಿಂದಾಗಿ ಈ ಭಾಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ಘಟನೆಯಿಂದಾಗಿ ಯಾವುದೇ ಅನಾಹುತವಾಗಿಲ್ಲ.

ಕಾರಟಗಿ ರೈಲು ನಿಲ್ದಾಣದ ಸಮೀಪವೇ ಈ ಘಟನೆ ನಡೆದಿದೆ.  ರೈಲು ಯಶವಂತಪುರದಿಂದ ಕಾರಟಗಿ ನಿಲ್ದಾಣಕ್ಕೆ ಆಗಮಿಸುವ ವೇಳೆ ರೈಲು ಹಳಿ ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಮುಂದಾಗಬಹುದಾಗಿದ್ದ ಅನಾಹುತ ತಪ್ಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಂಜಿನ್ ಸಂಪೂರ್ಣ ಹಳಿ ತಪ್ಪಿದೆ. ಇದರಿಂದಾಗಿ ಇತರ ರೈಲುಗಳ ಸಂಚಾರಕ್ಕೆ ಅಡೆತಡೆಯಾಗಿದೆ.

 

Share Post