DistrictsPolitics

ಗೃಹಲಕ್ಷ್ಮೀ ಯೋಜನೆ ವಿಶ್ವದಲ್ಲೇ ದೊಡ್ಡ ಯೋಜನೆ; ರಾಹುಲ್‌ ಗಾಂಧಿ

ಮೈಸೂರು; ಒಂದು ಕಟ್ಟಡ ಭದ್ರವಾಗಿರಬೇಕಾದರೆ ಒಂದು ಭದ್ರ ಬುನಾದಿ ಇರಬೇಕಾಗುತ್ತದೆ. ನಾವು ಅಂತಹ ಭದ್ರ ಬುನಾದಿ ಹಾಕಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಗೃಹಲಕ್ಷ್ಮೀ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಭಾರತ್‌ ಜೋಡೋ ಕಾರ್ಯಕ್ರಮ ಮಾಡುವಾಗ ಸಾವಿರಾರು ಮಹಿಳೆಯರ ಜೊತೆ ಮಾತನಾಡಿಸಿದ್ದೆ. ಕರ್ನಾಟಕದಲ್ಲಿ 600 ಕಿಲೋ ಮೀಟರ್‌ ಪಾದಯಾತ್ರೆ ಮಾಡಿದ್ದೇವೆ. ಈ ವೇಳೆ ಮಹಿಳೆಯರು ಬೆಲೆ ಏರಿಕೆ ಹಾಗೂ ಅದರಿಂದ ಆಗುತ್ತಿರುವ ಸಂಕಷ್ಟದ ಬಗ್ಗೆ ವಿವರಿಸಿದ್ದರು. ಹೀಗಾಗಿ, ನಾವು ಗ್ಯಾರೆಂಟಿ ಯೋಜನೆಗಳನ್ನು ನೀಡುವ ಬಗ್ಗೆ ತೀರ್ಮಾನ ಮಾಡಿದೆವು ಎಂದು ಹೇಳಿದೆವು.

ಚುನಾವಣೆಗೆ ಮೊದಲು ನಾವು ಐದು ವಚನಗಳನ್ನು ಕೊಟ್ಟಿದ್ದೆವು. ನಮಗೊಂದು ಬದ್ಧತೆ ಇತ್ತು. ನಾವು ನುಡಿದಂತೆ ನಡೆದಿದ್ದೇವೆ. ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕ ಸರ್ಕಾರ ಮಾತ್ರ ಎಂದು ರಾಹುಲ್‌ ಗಾಂಧಿ ಹೇಳಿದರು. ಕೋಟ್ಯಂತರ ತಾಯಂದಿರಿಗೆ ನಾವು ತಲಾ ಎರಡು ಸಾವಿರ ರೂಪಾಯಿ ಜಮೆ ಮಾಡಿದ್ದೇವೆ. ಪ್ರತಿ ತಿಂಗಳೂ ಕೂಡಾ ಎರಡು ಸಾವಿರ ರೂಪಾಯಿ ಜಮೆಯಾಗಲಿದೆ. ಇದು ನಮ್ಮ ಹಾಗೂ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಭರವಸೆಯಾಗಿದೆ. ನಾವು ನಿಮಗೆ ಮತ್ತೊಂದು ಭರವಸೆ ಕೊಟ್ಟಿದ್ದೆವು. ಬಸ್‌ನಲ್ಲಿ ಪ್ರಯಾಣ ಮಾಡುವಾಗ ಉಚಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದ್ದೆವು. ಶಕ್ತಿ ಯೋಜನೆ ಅನುಷ್ಠಾನಕ್ಕೆ ತಂದಿದ್ದೇವೆ. ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯನ್ನೂ ಕೂಡಾ ನಾವು ಅನುಷ್ಠಾನ ಮಾಡಿದ್ದೇವೆ ಎಂದು ರಾಹುಲ್‌ ಗಾಂಧಿ ಹೇಳಿದರು.

ವಿಶ್ವದಲ್ಲೇ ಈ ಮಟ್ಟದ ಹಣವನ್ನು ನೇರವಾಗಿ ವರ್ಗಾವಣೆ ಮಾಡುವ ಯೋಜನೆ ಇಲ್ಲ. ಮಹಿಳೆಯರು ಈ ಹಣವನ್ನು ಉಳಿಸಬಹುದು, ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಬಹುದು. ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಈ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Share Post