ರೇಣುಕಾಚಾರ್ಯ ಸಹೋದರನ ಮಗ ಶವವಾಗಿ ಪತ್ತೆ
ದಾವಣಗೆರೆ; ಐದು ದಿನಗಳಿಂದ ನಾಪತ್ತೆಯಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಶವವಾಗಿ ಪತ್ತೆಯಾಗಿದ್ದಾರೆ. ಭದ್ರಾ ಕಾಲುವೆಯಲ್ಲಿ ಕಾರು ಪತ್ತೆಯಾಗಿದ್ದು, ಕ್ರೇನ್ ಮೂಲಕ ಕಾರು ಹೊರತೆಗೆದಾಗ ಕಾರಿನಲ್ಲೇ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹೊನ್ನಾಳಿ ಮತ್ತು ನ್ಯಾಮತಿ ಮಧ್ಯದಲ್ಲಿರುವ ಭದ್ರಾ ಕಾಲುವೆ ಬಳಿ ಕಾರಿನ ಅವಶೇಷಗಳು ಸಿಕ್ಕಿದ್ದವು. ಇದ್ರಿಂದ ಅನುಮಾನಗೊಂಡು ಹುಡುಕಾಟ ನಡೆಸಿದಾಗ ನೀರಿನಲ್ಲಿ ಕಾರು ಪತ್ತೆಯಾಗಿದೆ. ಹೊರತೆಗೆದಾಗ ಕಾರಿನ ಹಿಂಭಾಗದ ಸೀಟಿನಲ್ಲಿ ಚಂದ್ರಶೇಖರ್ ಮೃತದೇಹ ಸಿಕ್ಕಿದೆ.
ಚಂದ್ರು ನಾಪತ್ತೆಯಾದಾಗಿನಿಂದ ಶಾಸಕ ರೇಣುಕಾಚಾರ್ಯ ಗೋಳಾಟ ನಡೆಸುತ್ತಿದ್ದರು. ಇದೀಗ ಚಂದ್ರು ಶವವಾಗಿ ಪತ್ತೆಯಾಗಿದ್ದಾರೆ. ಇದು ಕೊಲೆಯೋ ಅಥವಾ ಹೇಗೆ ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.