DistrictsPolitics

ಅನ್ನ ಕೊಟ್ಟ ದೇವ್ರು ನೀನು ಚೆನ್ನಾಗಿರಪ್ಪ; ಸಿಎಂಗೆ ಹರಸಿದ ಮಹಿಳೆ

ಮೈಸೂರು; ಅನ್ನ ಕೊಟ್ಟ ದೇವ್ರು ನೀನು ಚೆನ್ನಾಗಿರಪ್ಪ ಎಂದು ಮಹಿಳೆಯೊಬ್ಬರು ಸಿಎಂ ಸಿದ್ದರಾಮಯ್ಯರನ್ನು ಹರಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಇದೇ ವೇಳೆ ಉತ್ತನಹಳ್ಳಿಯ ಮಾರಮ್ಮ ದೇವಸ್ಥಾನಕ್ಕೆ ಅವರು ಭೇಟಿ ನೀಡಿದ್ದರು. ಈ ವೇಳೆ ಈ ಘಟನೆ ನಡೆದಿದೆ.

ಸಿಎಂ ಸಿದ್ದರಾಮಯ್ಯ ಅವರು ದೇವರ ದರ್ಶನ ಪಡೆದು ಕಾರಿನತ್ತ ತೆರಳುತ್ತಿದ್ದರು. ಈ ವೇಳೆ ಬಂದ ಗ್ರಾಮದ ಮಹಿಳೆ ಸಿಎಂ ಸಿದ್ದರಾಮಯ್ಯಗೆ ಕೈ ಮುಗಿದಿದ್ದಾರೆ. ನಂತರ ಅನ್ನ ಕೊಟ್ಟ ದೇವರು ನೀವು. ಚೆನ್ನಾಗಿರಪ್ಪ ಎಂದಿದ್ದಾರೆ. ಸಿದ್ದರಾಮಯ್ಯ ಅವರು ಮುಗುಳ್ನಕ್ಕು ಕಾರು ಹತ್ತಿ ತೆರಳಿದ್ದಾರೆ.

 

Share Post