Districts

ನೀವೂ ಸತ್ತು ಅವರನ್ಯಾಕೆ ಸಾಯಿಸುತ್ತೀರಿ..?ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ನಾಳೆ ಕಾಂಗ್ರೆಸ್‌ ನಾಯಕರ ಮೇಕೆದಾಟು ಪಾದಯಾತ್ರೆ ಬಗ್ಗೆ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಈಗಾಗಲೇ ಹಲವಾರು ಬಾರಿ ಪಾದಯಾತ್ರೆ ಕೈಬಿಡಿ ಎಂದು ಮನವಿ ಮಾಡಿದ್ದೇವೆ, ಎಚ್ಚರಿಕೆ ಕೊಟ್ಟಿದ್ದೇವೆ ಏನೇ ಮಾಡಿದ್ರೂ ಅವರು ಪಾದಯಾತ್ರೆ ಕೈಬಿಡುವಂತೆ ಕಾಣ್ತಿಲ್ಲ ಎಂದು ಗುಡುಗಿದ್ದಾರೆ. ನೀವು ಪಾದಯಾತ್ರೆ ಮಾಡಿ ಸಾಯಬೇಡಿ ಅಂತ ನಾವು ಹೇಳಿದ್ರೆ ಇಲ್ಲ ನಾವು ಜಂಟಿಯಾಗಿ ಸಾಯಲು ರೆಡಿ ಅಂತಿದಾರೆ. ಹೀಗೆ ಹಠ ಮಾಡಿದ್ರೆ ನಾವು ತಾನೆ ಏನ್‌ ಮಾಡೋದು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಈಹ ನಾಯಕರು ಇಬ್ಬರೇ ಪಾದಯಾತ್ರೆಗೆ ಹೋಗ್ತೀವಿ ಅಂದ್ರೆ ಕಾಂಗ್ರೆಸ್‌ ಕಾರ್ಯಕರ್ತರು ಬಿಡಲ್ಲ, ಅದು ಅವರಿಗೂ ತಿಳಿದಿರುವ ವಿಚಾರ. ಚುನಾವಣೆ ಸಮಯ ಬೇರೆ ಶೋ ಮಾಡೋದಕ್ಕಾಂತನೇ ಕೆಲವರು ಬರ್ತಾರೆ. ಹಾಗಾಗಿ ಸುಮ್ಮನೆ ನೀವ್ಯಾಕೆ ಸಾಯ್ತೀರಿ ನಿಮ್ಮ ಜೊತೆಗೆ ಅವರನ್ಯಾಕೆ ಸಾಯೋ ಹಾಗೆ ಮಾಡ್ತೀರಿ? ನಿಮ್ಮ ಆರೋಗ್ಯ ನಮಗೆ ಬಹಳ ಮುಖ್ಯ, ಣಿವು ಆರೋಗ್ಯವಾಗಿದ್ದರೆ ಅದಕ್ಕಿಂತ ಬೇರೆ ಸಂತೋಷ ಮತ್ತೊಂದಿಲ್ಲ. ನಾವು ನೀವು ಎಲ್ಲರೂ ಒಗ್ಗಟ್ಟಾಗಿ ಸಂತೋಷದಿಂದ ಜೀವನ ಸಾಗಿಸೋಣ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್‌ ನಾಯಕರ ಕಾಲೆಳೆದಿದ್ದಾರೆ.

Share Post