CrimeDistricts

ಗಾಂಜಾ ದಂಧೆಕೋರರಿಂದ ಪೊಲೀಸರ ಮೇಲೆ ದಾಳಿ; ಐಸಿಯುನಲ್ಲಿ ಚಿಕಿತ್ಸೆ

ಕಲಬುರಗಿ; ಗಾಂಜಾ ದಂಧೆ ನಡೆಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಕರ್ನಾಟಕ-ಮಹಾರಾಷ್ಟ್ರ ಗಡಿಯಂಚಿನಲ್ಲಿ ನಡೆದಿದೆ. ಬೀದರ್‌ ಜಿಲ್ಲೆ ಬಸವ ಕಲ್ಯಾಣ ತಾಲ್ಲೂಕಿನ ಭೋಸಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಹಾರಾಷ್ಟ್ರ ಮೂಲದ ಕೆಲ ವ್ಯಕ್ತಿಗಳು ಗಾಂಜಾ ಬೆಳೆದಿದ್ದರು ಎಂದು ಹೇಳಲಾಗಿದೆ. ದಂಧೆಕೋರರು ಕಲಬುರಗಿ ಜಿಲ್ಲಾ ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲೆ, ಮುಖ, ಹೊಟ್ಟೆ ಭಾಗಗಳಲ್ಲಿ ಗಂಭೀರ ಗಾಯಗೊಂಡಿರುವ ಇಲ್ಲಾಳ ಅವರೀಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share Post