Districts

ಮೈಸೂರಿಗೆ ಆಗಮಿಸಿದ ದಸರಾ ಆನೆಗಳು; ಜಗಪಡೆಗೆ ಅರಣ್ಯಾಧಿಕಾರಿಗಳಿಂದ ಪೂಜೆ

ಮೈಸೂರು; ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಶುರುವಾಗಿದೆ. ಜಂಬೂ ಸವಾರಿ ನಡೆಸುವ ಆನೆಗಳು ಈಗಾಗಲೇ ಮೈಸೂರಿಗೆ ಬಂದಿದೆ. ವಿವಿಧೆಡೆ ಆನೆ ಶಿಬಿರಗಳಲ್ಲಿದ್ದ ದಸರಾ ಆನೆಗಳನ್ನು ಮೈಸೂರಿಗೆ ಕರೆತರಲಾಗಿದೆ. ಇಂದು ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಅರಣ್ಯಾಧಿಕಾರಿಗಳು ದಸರಾ ಆನೆಗಳಿಗೆ ಪೂಜೆ ಸಲ್ಲಿಸಿ, ಅವುಗಳಿಗೆ ಗೌರವ ಸಲ್ಲಿಸಿದ್ದಾರೆ. ಆನೆಗಳನ್ನು ಮೈಸೂರಿಗೆ ಕರೆತಂದಾಗ ಅವುಗಳನ್ನು ವಿಶೇಷವಾಗಿ ಸಂಗರಿಸಿ, ಪೂಜೆ ಸಲ್ಲಿಸಿ ಬರಮಾಡಿಕೊಳ್ಳೋದು ವಾಡಿಕೆ. ಅದರಂತೆ ಇಂದು ಎಲ್ಲಾ ಆನೆಗಳಿಗೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.

Share Post