ಇಂದಿನಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ; ಬಸ್ ಎಲ್ಲೆಲ್ಲಿ ಸಂಚರಿಸುತ್ತೆ ಗೊತ್ತಾ..?
ಬೆಳಗಾವಿ; ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಕಾಂಗ್ರೆಸ್ ಇಂದಿನಿಂದ ಬಸ್ ಯಾತ್ರೆ ನಡೆಸಲಿದೆ. ಇದಕ್ಕೆ ಪ್ರಜಾಧ್ವನಿ ಯಾತ್ರೆ ಎಂದು ಹೆಸರಿಡಲಾಗಿದೆ. ಇಂದು ಬೆಳಗಾವಿಯ ಚಿಕ್ಮೋಡಿಯಲ್ಲಿ ಇಂದು ಬಸ್ ಯಾತ್ರೆಗೆ ಚಾಲನೆ ದೊರೆಯಲಿದೆ.
ಜಂಟಿ ಬಸ್ ಯಾತ್ರೆ ರಾಜ್ಯದ 21 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮೊದಲ ದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಒಟ್ಟಿಗೆ ಪ್ರವಾಸ ಮಾಡಲಿದ್ದಾರೆ. ನಂತರ ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಪ್ರವಾಸ ಮಾಡಲಿದ್ದಾರೆ. ಮತ್ತೊಂದು ಬಸ್‌ನಲ್ಲಿ ಡಿ.ಕೆ.ಶಿವಕುಮಾರ್ ಸಂಚರಿಸಲಿದ್ದಾರೆ.
ಮೊದಲ ಹಂತದ ಕಾಂಗ್ರೆಸ್ ಬಸ್ ಯಾತ್ರೆ ಇಂದಿನಿಂದ ಜನವರಿ 27ರವರೆಗೆ ನಡೆಯಲಿದೆ. ಈ ಯಾತ್ರೆ ಮೂಲಕ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವೈಫಲ್ಯ, ಹಗರಣಗಳು, ಭ್ರಷ್ಟಾಚಾರಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಮೊದಲಿಗೆ ಐದು ದಿನಗಳ ಕಾಲ ಬೆಳಗಾವಿ ಜಿಲ್ಲೆಯಾದ್ಯಂತ ಬಸ್ ಸಂಚರಿಸಲಿದೆ. ಅನಂತರ ಹೊಸಪೇಟೆ, ಕೊಪ್ಪಳ, ವಾಹಕ ಕೋಟೆ, ಗದಗ,ಹಾವೇರಿ ದಾವಣಗೆರೆ, ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಸಂಚಾರ ನಡೆಸಲಿದೆ.