Districts

ಮದುವೆ ಮನೆಯಲ್ಲಿ ಸೂತಕದ ಛಾಯೆ:ಚೈತ್ರಾ ಅಂಗಾಂಗ ದಾನ

ಕೋಲಾರ: ಸಾವಿರಾರು ಕನಸನ್ನು ಹೊತ್ತು ಹೊಸ ಜೀವನಕ್ಕೆ ಕಾಲಿಡಲು ಮುಂದಾಗಿದ್ದ ಚೈತ್ರಾ ಬಾಳಲ್ಲಿ ವಿಧಿಯಾಟ ಕ್ರೂರವಾಗಿ ವರ್ತಿಸಿದೆ. ಆರತಕ್ಷತೆಯಲ್ಲಿ ನಿಂತಿದ್ದ ನವ ಮದುಮಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಶ್ರೀನಿವಾಸ ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲು ಮಾಡಿದ್ದಾರೆ. ಸತತ ಐದು ದಿನಗಳಿಂದ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಚೈತ್ರಾ ಇಂದು ಮೃತಪಟ್ಟಿದ್ದಾಳೆ. ಅತ್ಯಂತ ದುಃಖದಲ್ಲೂ ಚೈತ್ರಾ ಕುಟುಂಬಸ್ಥರು ಆಕೆಯ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ರಾಮಪ್ಪ ಮತ್ತು ಆಕ್ಕೆಮ್ಮ ದಂಪತಿಯ ಏಕೈಕ ಪುತ್ರಿ ಚೈತ್ರಾ ಉಪನ್ಯಾಸಕಿಯಾಗಿ  ಕೈವಾರ ಬಳಿಯ ಬೈರವೇಶ್ವರ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತಿಚೆಗಷ್ಟೇ ಹೊಸಕೋಟೆಯ ಯುವಕನೊಂದಿಗೆ ಫೆಬ್ರವರಿ-6 ಮತ್ತು 7 ರಂದು ಶ್ರೀನಿವಾಸಪುರದ ಮಾರುತಿ ಸಭಾ ಭವನದಲ್ಲಿ ಮದುವೆ ನಿಶ್ಚಯವಾಗಿ, ಆರತಕ್ಷತೆ ವೇಳೆ ಮದುಮಗಳು ಏಕಾಏಕಿ ಕುಸಿದು ಬಿದ್ದಿದ್ದಾಳೆ. ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ವೈದ್ಯರು ಬ್ರೈನ್‌ ಡೆತ್‌ ಎಂದು ಕನ್ಫರ್ಮ್‌ ಮಾಡಿದ್ದಾರೆ.

ಐದು ದಿನಗಳಿಂದ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಚೈತ್ರಾ ಇಂದು ಸಾವನ್ನಪ್ಪಿದ್ದಾರೆ. ಅತ್ಯಂತ ದುಃಖದ ಸಮಯದಲ್ಲೂ ಚೈತ್ರಾ ಹೆತ್ತವರು ಮಗಳ ಅಂಗಾಂಗ ದಾನ ಮಾಡಿ ನೋವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಟ್ವೀಟ್‌ ಮಾಡಿ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಹಾಗೂ ಅವರ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಗಳನ್ನು ಕಲೆದುಕೊಂಡು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಮದುವೆಯಿಂದ ಕಂಗೊಳಿಬೇಕಿದ್ದ ಮನೆಯೀಗ ಸೂತಕದ ವಾತಾವರಣದಿಂದ ಕೂಡಿದೆ.

 

Share Post