ಹಾಸನದಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಅಡಿಕೆ ತೋಟ ನಾಶ
ಹಾಸನ: ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ಯಾರೋ ಕಿಡಿಗೇಡಿಗಳು ನಾಶಮಾಡಿರುವ ಘಟನೆ ಹಾಸನದ ಬೇಲೂರು ತಾಲೂಕಿನ ಅಜ್ಜನಹಳ್ಳಿಯಲ್ಲಿ ನಡೆದಿದೆ. ಸುಮಾರು ೫೦೦ ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕತ್ತರಿಸಿದ್ದಾರೆ. ಬೆಳೆ ಕಳೆದುಕೊಂಡು ರೈತ ವೀರಲಿಂಗೇಗೌಡ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಯಾರೋ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸಾಲ-ಸೋಲ ಮಾಡಿ ಬೆಳೆದಿದ್ದ ಬೆಳೆ ಮಣ್ಣುಪಾಲಾಯಿತು. ಏರು ವರ್ಷಗಳಿಂದ ತೋಟವನ್ನು ಕಾಪಾಡಿಕೊಂಡು ಬಂದಿದ್ದ ರೈತ ಪ್ರಸ್ತುತ ಸ್ಥಿತಿ ಕಂಡು ತಲೆ ಮೇಲೆ ಕೈ ಹೊತ್ತು ಕೂತಿದ್ದಾನೆ. ಒಂದು ವಾರದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಂದು ಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಅಡಕೆ ತೋಟದ ಸ್ಥಿತಿ ಕಂಡು ಕಂಗಾಲಾಗಿದ್ದಾನೆ. ಘಟನೆ ಸಂಬಂಧ ಹಳೇಬೀಡು ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೇಲೂರು ತಹಶೀಲ್ದಾರ್‌ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ಪ್ರಕೃತಿ ವೈಪರೀತ್ಯಗಳಿಂದ ಬಳಲಿ ಬೆಂಡಾಗಿರುವ ರೈತನಿಗೆ, ಕೊರೊನಾ ಕೂಡ ಹೊಡೆತ ಕೊಟ್ಟಿದೆ ಇವೆಲ್ಲದರ ಮಧ್ಯೆ ದುಷ್ಕರ್ಮಿಗಳ ಕೃತ್ಯಕ್ಕೆ ಅನ್ನದಾತ ನಲುಗಿ ಹೋಗಿದ್ದಾನೆ