DistrictsPolitics

ನನ್ನನ್ನ, ನನ್ನ ಮಗನನ್ನ ಸಹಕಾರ ಕ್ಷೇತ್ರದಿಂದ ದೂರವಿಡುವ ಪ್ರಯತ್ನ; ಸಿದ್ದು ವಿರುದ್ಧ ಜಿಟಿಡಿ ಕಿಡಿ

ಮೈಸೂರು; ನಾನು ಹಲವು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಬಂದಿದ್ದೇವೆ. ಆದ್ರೆ ಸಿಎಂ ಸಿದ್ದರಾಮಯ್ಯ ಅವರು ನನ್ನನ್ನ ಹಾಗೂ ನನ್ನ ಮಗನನ್ನು ಸಹಕಾರ ಕ್ಷೇತ್ರದಿಂದ ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ.ಟಿ.ದೇವೇಗೌಡ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದಾಗಲೂ ನನ್ನನ್ನು ಸಹಕಾರ ಕ್ಷೇತ್ರದ ಮಹಾಮಂಡಲದಿಂದ ತೆಗೆದುಹಾಕಿದ್ದರು. ಇದೀಗ ನನ್ನ ಪುತ್ರ ಹರೀಶ್‌ ಗೌಡರನ್ನು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನಿಂದ ತೆಗೆಸುವ ಪ್ರಯತ್ನದಲ್ಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜಿ.ಟಿ.ದೇವೇಗೌಡ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ನಮ್ಮ ವಿರುದ್ಧ ಏನೇ ಮಾಡಿದರೂ ಸಹಕಾರಿಗಳು ತಮ್ಮ ಜೊತೆ ಇರುತ್ತಾರೆ. ಇನ್ನಾರು ತಿಂಗಳಲ್ಲಿ ಚುನಾವಣೆ ನಡೆಸಿದರೆ ಅವರು ಪುನಃ ನಮ್ಮನ್ನೇ ಆಯ್ಕೆ ಮಾಡುತ್ತಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.

Share Post