CinemaDistricts

ಕಾಪು ಮಾರಿಗುಡಿ ಕ್ಷೇತ್ರದಲ್ಲಿ ಜಯಪ್ರದಾ ವಿಶೇಷ ಪೂಜೆ

ಉಡುಪಿ; ಇಲ್ಲಿನ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ರಾಜ್ಯಸಭಾ ಸದಸ್ಯೆ ಹಾಗೂ ಹಿರಿಯ ನಟಿ ಜಯಪ್ರದಾ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಾರಿಯಮ್ಮ ಉಚ್ಚಂಗಿ ದೇವಿಯ ದರ್ಶನ ಪಡೆದ ಅವರು, ನಂತರ ಹೊಸದಾಗಿ ನಿರ್ಮಾಣವಾಗ್ತಿರುವ ಮಾರಿಯಮ್ಮ ದೇವಸ್ಥಾನ ವೀಕ್ಷಿಸಿದರು.

ಕಾಪು ಹೊಸ ಮಾರಿಗುಡಿ ದೇವರಿಗೆ ನಟಿ ಜಯಪ್ರದಾ ಅವರು ಹರಕೆ ಹೊತ್ತಿದ್ದು, ಅದನ್ನು ತೀರಿಸಲು ಬಂದಿದ್ದರು ಎಂದು ತಿಳಿದುಬಂದಿದೆ. ಜಯಪ್ರದಾ ಅವರೊಂದಿಗೆ ಆಪ್ತರು ಆಗಮಿಸಿದ್ದರು.

Share Post