Districts

ಬಾಹ್ಯ ಸೌಂದರ್ಯದ ಬದಲಿಗೆ, ಆಂತರಿಕ ಸೌಂದರ್ಯಕ್ಕೆ ಮೆಚ್ಚಿ ಮದುವೆಯಾದ ಬಲು ಅಪರೂಪದ ಜೋಡಿ ಇವರೇ..ನೋಡಿ

ಬಾಗಲಕೋಟೆ: ಬಾಹ್ಯ ಸೌಂದರ್ಯದಲ್ಲೇನಿದೆ ಮಣ್ಣು…ಆಂತರಿಕ ಸೌಂದರ್ಯವನ್ನು ಮೆಚ್ಚಿ ಒಬ್ಬರನ್ನೊಬ್ಬರು ಪರಸ್ಪರ ಮೆಚ್ಚಿ ನವಜೋಡಿ ಹಸಮಣೆ ಏರಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಅದರಲ್ಲೇನಿದೆ ವಿಶೇಷ ಅಂತೀರಾ…ಇದೆ ಕಣ್ರೀ, ಈ ಜೋಡಿ ಇಬ್ಬರಿಗೂ ಒಂದೊಂದು ಲೋಪ ಇದೆ ಅದನ್ನು ಬದಿಗಿಟ್ಟು ಈ ಇಬ್ಬರು ಯುವಕ-ಯುವತಿ ಎಲ್ಲವನ್ನೂ ಮೀರಿ ಹೊಸ ಬದುಕಿಗೆ ನಾಂದಿ ಹಾಡಿದ್ದಾರೆ.

28ವರ್ಷದ ಕುಬ್ಜ ಯುವಕ, ಹಾಗೂ ಇಂದು ಕಣ್ಣಿನ ದೋಷ ಇರುವ ಈ ನವ ಜೋಡಿಗೆ ದಾಂಪತ್ಯಕ್ಕೆ ನೆರೆದಿರುವ ಜನರೇ ಸಾಕ್ಷಿ. ತುಂಬಾ ಕುಬ್ಜನಾಗಿದ್ದಾನೆ ಎಂಬ ಕಾರಣಕ್ಕೆ ಬಸವರಾಜುಗೆ ಹೆಣ್ಣು ಕೊಡಲು ನಿರಾಕರಿಸಿದ್ದಾರೆ. ಹಾಗೆಯೇ ದೃಷ್ಟಿ ದೋಷದ ಕಾರಣದಿಂದಾಗಿ ರುಕ್ಷಿಣಿಯನ್ನು ಸಹ ಮದುವೆಯಾಗಲು ಯಾರೂ ಒಪ್ಪಲಿಲ್ಲ. ಇದೀಗ ತಮ್ಮಲ್ಲಿರುವ ಲೋಪವನ್ನು ಬದಿಗಿಟ್ಟು ಈ ಇಬ್ಬರೂ ಹಸೆ ಮಣೆ ಏರಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ಬಸವರಾಜುಗೆ ಮದುವೆ ಮಾಡಲು ತಾಯಿ ಶಾಮತವ್ವ ಐದು ವರ್ಷಗಳಿಂದ ಹೆಣ್ಣು ಹುಡುಕಿ ಹುಡುಕಿ ಸುಸ್ತಾಗಿದ್ದರು. ಇದೀಗ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಗಣಿ ಗ್ರಾಮದ ಬಂಗಾರೆವ್ವ-ಮಲ್ಲಪ್ಪ ಕುಂಬಾರ ಅವರ ಮಗಳು ರುಕ್ಮಿಣಿಯೊಂದಿಗೆ ಮಗನ ಮದುವೆಯಅಗಿರುವುದು ಶಾಂತವ್ವಗೆ ಎಲ್ಲಿಲ್ಲದ ಸಂತೋಷ ತಂದಿದೆ.

ಪಾನ್‌ ಶಾಪ್‌ ಇಟ್ಕೊಂಡು ಜೀವನ ಸಾಗಿಸುತ್ತಿರುವ ಬಡಕುಟುಂಬ ಆದ್ರೂ ಮಗ-ಸೊಸೆಯನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಶಾಂತವ್ವ ಭಾವುಕರಾದ್ರು. ಇನ್ನೂ ಇವರ ಮದುವೆಗೆ ಆಮಂತ್ರಣ ನೀಡಿ ಬಂದರುವ ಜನರಲ್ಲದೆ. ಈ ಅಪರೂಪದ ಜೋಡಿ ನೋಡಲು ಜನರ ದಂಡೇ ಆಗಮಿಸಿದೆ. ಒಬ್ಬ ಕುಬ್ಜ ಯುವಕ, ಐದೂವರೆ ಅಡಿ ಎತ್ತರದ ಯುವತಿ ಮದುವೆ ನೋಡಿ ಜನ ಅವರನ್ನು ಹರಸಿ ಆಶೀರ್ವದಿಸಿದ್ದಾರೆ.

Share Post