ನ್ಯಾಯಸಮ್ಮತವಾಗಿ ಕಾಯ್ದೆ ಅಂಗೀಕಾರ ಆಗತ್ತೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ವಿಧಾನಪರಿಷತ್ನಲ್ಲಿ ಮತಾಂತರ ಮಸೂದೆ ಅಂಗೀಕಾರಕ್ಕೆ ಯಾವುದೇ ಹಿನ್ನಡೆಯಾಗಿಲ್ಲ, ನಮಗೆ ಬೇಕಾಗಿರುವ ಅಗತ್ಯ ಬೆಂಬಲ ಸಿಗದೇ ಇರುವ ಕಾರಣ ಮಸೂದೆ ಮಂಡನೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು. ನಮ್ಮ ಪಕ್ಷದ ಮೂರ್ನಾಲ್ಕು ಸದಸ್ಯರು ಅಧಿವೇಶನಕ್ಕೆ ಗೈರಾಗಿದ್ರು. ಆ ಕಾರಣದಿಂದಾಗಿ ನಾವು ಮಸೂದೆ ಮಂಡನೆ ಮಾಡೋಕೆ ಆಗಿಲ್ಲ. ಅವರನ್ನು ಕರೆತರುವ ಪ್ರಯತ್ನವನ್ನು ಕೂಡ ಮಾಡಿದ್ವಿ, ಆದ್ರೆ ಅದು ಸಾಧ್ಯವಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ತಪ್ಪದೇ ಮಸೂದೆಯನ್ನು ನ್ಯಾಯಯುತವಾಗಿ ಮಂಡನೆ ಮಾಡುವುದಾಗಿ ಹೇಳಿದ್ರು.
ಇದರ ಜೊತೆಗೆ ಈ ಮಸೂದೆ ಪಾಸಾಗದಂತೆ ವಿರೋಧ ಪಕ್ಷದವರು ನಾನಾ ಕಸರತ್ತನ್ನು ಮಾಡಿದ್ರು. ಸಭಾಪತಿ ಎಂಬ ಗೌರವವನ್ನೂ ಕೊಡದೆ ಮಾತನಾಡಿದ್ರು. ಅವರ ಜವಾಬ್ದಾರಿಯುತ ಸ್ಥಾನಕ್ಕೆ ವಿರುದ್ಧವಾಗಿ ಅವರೊಂದಿಗೆ ನಡೆದುಕೊಂಡಿದ್ದಾರೆ. ಇದು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತುಂಬಾ ನೋವುಂಟುಮಾಡಿದೆ. ಸದನದ ಸಮಯವನ್ನು ವಿಪಕ್ಷದವರು ಹಾಳು ಮಾಡಿದ್ರು ಎಂದು ಸಿಎಂ ಕಿಡಿ ಕಾರಿದ್ರು.