CrimeDistricts

ಪತ್ನಿಗೆ ಗುಂಡಿಕ್ಕಿ ಕೊಂದ, ತಾನೂ ನೇಣಿಗೆ ಶರಣಾದ ಪಾಪಿ!

ಹಾಸನ; ನಾಡಬಂದೂಕಿನಿಂದ ಹೆಂಡತಿಗೆ ಗುಂಡಿಕ್ಕಿ ಕೊಂದ ಪಾಪಿ ಗಂಡ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಹಾಸನ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. 45 ವರ್ಷದ ಜಾಜಿ ಎಂಬ ಮಹಿಳೆಯೇ ಕೊಲೆಯಾದಾಕೆ. ಆಕೆಯ ಗಂಡ ಹರೀಶ್‌ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ಈ ಕುಟುಂಬ ವಾಸವಿತ್ತು.. ನಿತ್ಯವೂ ಗಂಡ-ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು.. ಅದು ಕಳೆದ ರಾತ್ರಿ ದೊಡ್ಡ ಮಟ್ಟದಲ್ಲಿ ನಡೆದಿದೆ.. ಜೋರು ಜಗಳವಾಗಿದ್ದರಿಂದ ರೊಚ್ಚಿಗೆದ್ದ ಪತಿ ನಾಡ ಬಂದೂಕು ತೆಗೆದುಕೊಂಡು ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ.. ಇದರಿಂದಾಗಿ ಪತ್ನಿ ಜಾಜಿ ಸಾವನ್ನಪ್ಪಿದ್ದಾಳೆ..
ಪತ್ನಿ ಸಾವನ್ನಪ್ಪುತ್ತಿದ್ದಂತೆ ಪತಿ ಹರೀಶ್‌ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೇ.. ಅರೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

Share Post