ಸರ್ಕಾರಿ ಶಾಲೆ ಅಂದ ಹೆಚ್ಚಿಸಿದ ಹಳೆ ವಿದ್ಯಾರ್ಥಿಗಳು
ರಾಯಚೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಅಂದರೆ ಸಾಕು ಮೂಗು ಮುರಿಯವರೆ ಹೆಚ್ಚು. ಖಾಸಗಿ ಶಾಲೆ ಹಾವಳಿಯಿಂದ ಸರ್ಕಾರಿ ಶಾಲೆಗೆ ಮಕ್ಕಳು ಬರುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ತೊಂದರೆ ಅಂತಾ ಪೊಷಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಹೈಟೆಕ್ ಶಾಲೆಗಿಂತಲೂ ಸರ್ಕಾರಿ ಶಾಲೆ ಏನು ಕಡಿಮೆ ಇಲ್ಲವೆಂದು ತೋರಿಸಿಕೊಟ್ಟಿದ್ದಾರೆ.
ಹೌದು ರಾಯಚೂರಿನ ಯರಮರಸ್ ಗ್ರಾಮದ ಸರ್ಕಾರಿ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳೇ ಸೇರಿಕೊಂಡು ಅಂದಗೊಳಿಸಿದ್ದಾರೆ. ಈ ಶಾಲೆಯ ಗೋಡೆ ಯಾವಾಗಬೇಕಾದ್ರೂ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಹೀಗಾಗಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಶಾಲೆಯನ್ನು ಚಿತ್ತಾರಗೊಳಿಸಿದ್ದಾರೆ. ಗೋಡೆಯ ಮೇಲೆ ಕಲರ್ ಫುಲ್ ಅಗಿರುವ ಅನಿಮಲ್ ಚಿತ್ರಗಳನ್ನು ಬಿಡಿಸಿ ಮಕ್ಕಳು ಸರ್ಕಾರಿ ಶಾಲೆ ಇತ್ತ ಗಮನಹರಿಸುವಂತೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಜನಪ್ರತಿನಿಧಿಗಳ ಸಹಾಯದಿಂದ ಶಾಲೆಯ ಕಟ್ಟಡವನ್ನು ಸರಿ ಮಾಡಿದ್ದಾರೆ. ಹೀಗಾಗಿ ಮಕ್ಕಳು ಸರ್ಕಾರಿ ಶಾಲೆಗೆ ಖುಷಿ ಖುಷಿಯಾಗಿ ಬರುತ್ತಿದ್ದಾರೆ.