CrimeNational

ಸುರಂಗ ಕೊರೆದು 1 ಕೋಟಿ ಮೌಲ್ಯದ ಚಿನ್ನಾಭರಣ ಕಳವು

ಲಕ್ನೋ; ಬ್ಯಾಂಕ್‌ಗೆ ಹತ್ತು ಅಡಿ ಸುರಂಗ ಕೊರೆದು ಲಾಕರ್‌ನಲ್ಲಿದ್ದ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿ ಖಾಲಿ ಜಾಗದಿಂದ 4 ಅಡಿ ಅಗಲದ ಸುರಂಗವನ್ನು ಅಗೆದು ಬ್ಯಾಂಕ್‌ಗೆ ನುಗ್ಗಿ ಈ ಕೃತ್ಯ ಎಸಗಲಾಗಿದೆ.

ಬ್ಯಾಂಕ್‍ನಲ್ಲಿದ್ದ 1.8 ಕೆಜಿಗಿಂತಲೂ ಹೆಚ್ಚು ತೂಕವಿದ್ದ 1 ಕೋಟಿ ಮೌಲ್ಯದ ಚಿನ್ನದ ಪೆಟ್ಟಿಗೆಯನ್ನು ದೋಚಲಾಗಿದೆ. ಆದರೆ 32 ಲಕ್ಷ ರೂ. ನಗದು ಪೆಟ್ಟಿಗೆಯನ್ನು ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅಧಿಕಾರಿಗಳು ಬ್ಯಾಂಕ್‍ಗೆ ಬಂದಾಗ ಈ ಕೃತ್ಯ ನಡೆದಿರುವುದು ಬಯಲಾಗಿದೆ.

Share Post