CrimeNational

40 ಮಕ್ಕಳಿದ್ದ ಶಾಲಾ ಬಸ್‌ ಡ್ರೈವರ್‌ ಅವಾಂತರ; ಸರಣಿ ಅಪಘಾತ!

ಹರಿಯಾಣ; 40 ಮಕ್ಕಳಿದ್ದ ಶಾಲಾ ಬಸ್‌ ನ ಡ್ರೈವರ್‌ ಅವಾಂತರದಿಂದಾಗಿ ಸರಣಿ ಅಪಘಾತ ಸಂಭವಿಸಿದೆ.. ಹರಿಯಾಣದ ಹಿಸ್ಸಾರ್‌ನಲ್ಲಿ ಈ ದುರ್ಘಟನೆ ನಡೆದಿದೆ.. ಭಾರೀ ಮಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ವೇಗವಾಗಿ ಬಸ್‌ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ..

ಕಾರು, ಕಂಟೇನರ್‌ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.. ಕಾರಿನಲ್ಲಿದ್ದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ಕಂಟೇನರ್‌ ನಿಧಾನವಾಗಿ ಚಲಿಸುತ್ತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.. ಶಾಲಾ ಬಸ್‌ನಲ್ಲಿ ದೆಹಲಿಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿದ್ದರು ಎಂದು ತಿಳಿದುಬಂದಿದೆ..

 

Share Post