Crime

ರೋಹಿಣಿ ಕೋರ್ಟ್‌ನಲ್ಲಿ ಬ್ಲಾಸ್ಟ್‌ ಪ್ರಕರಣ; ಡಿಆರ್‌ಡಿಒ ವಿಜ್ಞಾನಿ ಅರೆಸ್ಟ್‌

ನವದೆಹಲಿ: ಇಲ್ಲಿ ರೋಹಿಣಿ ಕೋರ್ಟ್‌ ಆವರಣದಲ್ಲಿ ಇತ್ತೀಚೆಗೆ ನಡೆಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಡಿಆರ್‌ಡಿಒ ವಿಜ್ಞಾನಿ ಎಂದು ತಿಳಿದುಬಂದಿದೆ.

47ವರ್ಷದ ವಿಜ್ಞಾನಿಯನ್ನು ಬಂಧಿಸಿರುವ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೋರ್ಟ್‌ನಲ್ಲಿ ವಿಜ್ಞಾನಿ ಯಾಕೆ ಸ್ಫೋಟಿಸಿದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಕೆಲ ದಿನಗಳ ಹಿಂದೆ ರೋಹಿಣಿ ಕೋರ್ಟ್‌ನಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿತ್ತು. ಈ ವೇಳೆ ಒಂದಿಬ್ಬರಿಗೆ ಗಾಯಗಳಾಗಿತ್ತು. ಒಂದು ಬಾಕ್ಸ್‌ನಲ್ಲಿ ಸ್ಫೋಟಕ ಇಡಲಾಗಿದ್ದು, ಅದು ಕೋರ್ಟ್‌ ಆವರಣದಲ್ಲಿ ಸ್ಫೋಟಗೊಂಡಿತ್ತು. ಆದರೆ ಕಡಿಮೆ ತೀವ್ರತೆಯ ಸ್ಫೋಟಕವಾದ್ದರಿಂದ ಯಾವುದೇ ಪ್ರಾಣಹಾನಿಯಾಗಿರಲಿಲ್ಲ.

Share Post