ರೇವ್ ಪಾರ್ಟಿ ಪ್ರಕರಣ; ಮತ್ತೊಂದು ವಿಡಿಯೋ ಬಿಟ್ಟ ನಟಿ ಹೇಮಾ..!
ಬೆಂಗಳೂರು; ನಿನ್ನೆ ಬೆಂಗಳೂರಿನಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು.. ಈ ವೇಳೆ ಅಲ್ಲಿ ತೆಲುಗಿನ ನಟ, ನಟಿಯರು ಇದ್ದರು ಎಂದು ಹೇಳಲಾಗಿತ್ತು.. ಅದರಲ್ಲಿ ತೆಲುಗಿನ ಖ್ಯಾತ ನಟಿ ಹೇಮಾ ಹೆಸರು ಕೂಡಾ ಕೇಳಿಬಂದಿತ್ತು.. ಅವರು ಅಲ್ಲಿ ಇದ್ದದ್ದು ನಿಜ ಎಂದು ಗೊತ್ತಾಗಿದೆ.. ಹೀಗಿದ್ದರೂ ಇದರ ನಡುವೆಯೇ ಅವರು ವಿಡಿಯೋ ಒಂದನ್ನು ಮಾಡಿ ನಾನು ಹೈದರಾಬಾದ್‌ನಲ್ಲೇ ಇದ್ದೇನೆ ಎಂದು ಹೇಳಿಕೊಂಡಿದ್ದರು.. ಇದೀಗ ಮತ್ತೆ ವಿಡಿಯೋವೊಂದನ್ನು ಬಿಟ್ಟಿದ್ದಾರೆ.. ಅದರಲ್ಲಿ ಚಿಕನ್ ಬಿರಿಯಾನಿ ಮಾಡೋ ವಿಡಿಯೋ ಅದಾಗಿದೆ.
ಬೆಂಗಳೂರು ಪೊಲೀಸರು ನಟಿ ಹೇಮಾ ಅವರ ಫೋಟೋವನ್ನು ಬಿಡುಗಡೆ ಮಾಡಿದ್ದರು. ಆ ಫೋಟೋದಲ್ಲಿ ಹೇಮಾ ಅವರ ಡ್ರೆಸ್ ಅವರು ಬಿಡುಗಡೆ ಮಾಡಿದ ವಿಡಿಯೋದಂತೆಯೇ ಇತ್ತು. ಇಲ್ಲಿಯೇ ಎಲ್ಲರಿಗೂ ಅನುಮಾನ ಬಂದಿತ್ತು. ಹೀಗಾಗಿ ಹೇಮಾ ಅವರು ಬೆಂಗಳೂರು ರೇವ್ ಪಾರ್ಟಿ ನಡೆದ ಫಾರ್ಮ್ ಹೌಸ್ ನಿಂದಲೇ ವಿಡಿಯೋ ,ಮಾಡಿದ್ದಾರೆ ಎಂದು ಎಲ್ಲರೂ ಅನುಮಾನ ಪಟ್ಟಿದ್ದರು. ನಿನ್ನೆ ಸಂಜೆಯವರೆಗೂ ಸಿಕ್ಕಿಬಿದ್ದವರನ್ನೆಲ್ಲ ಫಾರ್ಮ್‌ಹೌಸ್‌ನಲ್ಲಿ ಇರಿಸಲಾಗಿದ್ದು, ರಕ್ತದ ಮಾದರಿ ತೆಗೆದುಕೊಂಡು ಬಿಡುಗಡೆ ಮಾಡಲಾಗಿದೆ. ಆಗ ಮುಖಕ್ಕೆ ಮುಸುಕು ಹಾಕಿಕೊಂಡು ಹೋಗಿದ್ದು ಹೇಮಾನೇ ಎಂದು ಎಲ್ಲರೂ ಅಂದುಕೊಂಡಿದ್ದರು..
ಇದೀಗ ಕೆಲ ಹೊತ್ತಿನ ಹಿಂದೆ ನಟಿ ಹೇಮಾ ವಿಡಿಯೋ ರಿಲೀಸ್ ಮಾಡಿದ್ದಾರೆ.. ಮನೆಯಲ್ಲಿ ಬಿರಿಯಾನಿ ಅಡುಗೆ ಮಾಡುತ್ತಿದ್ದ ವಿಡಿಯೋ ಬಿಡುಗಡೆಯಾಗಿದೆ. ಮನೆಯಲ್ಲೇ ಇದ್ದೇನೆ ಎಂದು ಜನ ಅಂದುಕೊಳ್ಳಲಿ ಎಂಬ ಕಾರಣಕ್ಕೆ ಈ ವಿಡಿಯೋ ಪೋಸ್ಟ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.. ಅದೂ ಪೊಲೀಸರು ಬಿಟ್ಟು ಕಳುಹಿಸಿದ ಎಷ್ಟೋ ಗಂಟೆಗಳ ನಂತರ ಹೇಮಾ ಮತ್ತೊಂದು ವಿಡಿಯೋ ಮಾಡಿದ್ದಾರೆ.. ಆ ಮೂಲಕ ನಾನು ಹೈದರಾಬಾದ್‌ನಲ್ಲೇ ಇದ್ದೇನೆ ಎಂದು ಹೇಳಲು ಹೊರಟಿದ್ದಾರೆ ಎನ್ನಲಾಗಿದೆ.. ಆದ್ರೆ ನಿನ್ನೆಯೇ ಹೊರಬಂದ ಹೇಮಾ, ಹೈದರಾಬಾದ್‌ಗೆ ಹೋಗಿ ಈಗ ಈ ವಿಡಿಯೋ ಮಾಡಿರಬಹುದು ಎಂದು ಹೇಳಲಾಗಿದೆ..