ಪೊಲೀಸಪ್ಪನೇ ಬೈಕ್ ಕಳ್ಳತನ ಮಾಡಿಸ್ತಿದ್ದ !!!
ಬೆಂಗಳೂರು : ಆರಕ್ಷಕರೇ ಬಗೆದು ತಿಂದರೆ ನಾವ್ ಏನ್ ಮಾಡೋದು ಎಂದು ಸಾಕಷ್ಟು ಸಿನಿಮಾಗಳಲ್ಲಿ ನಾವು ಕೇಳಿರ್ತೀವಿ. ಈಗ ಅಂತಹದ್ದೇ ಒಂದು ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಹುಡುಗರನ್ನು ಬಳಸಿಕೊಂಡು ಬೈಕ್ ಕಳ್ಳತನ ಮಾಡಿಸುತ್ತಿದ್ದ ಕಾನ್ಸ್ಟೇಬಲ್‌ನನ್ನು ಅದೇ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.
ಕಾನ್ಸ್ಟೇಬಲ್ ಹೊನ್ನಪ್ಪ ರವಿ ಬಂಧಿತ ಆರೋಪಿ. ಆರೋಪಿಯನ್ನು ಮಾಗಡಿ ರಸ್ತೆಯಲ್ಲಿ ಬಂಧಿಸಲಾಗಿದೆ. ಈತ ಬೆಂಗಳೂರು, ರಾನೀಬೆನ್ನೂರು, ಬೆಂಗಳೂರು ಹೊರವಲಯ ಸೇರಿದಂತೆ ಇನ್ನೂ ಹಲವು ಕಡೆ ಕಳ್ಳತನ ಮಾಡಿಸುತ್ತಿದ್ದ. ಈವರೆಗೂ ಹೊನ್ನಪ್ಪ ರವಿ ಮಾರಾಟ ಮಾಡಿದ್ದ 53 ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊನ್ನಪ್ಪ, ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
೨೦೧೬ರಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಆಗಿ ವಿದ್ಯಾರಣ್ಯಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಕಳ್ಳತನ ಮಾಡಿ ಬೈಕ್ ಆಲ್ಟರ್ ಮಾಡಿ ಫೇಕ್ ಡಾಕ್ಯುಮೆಂಟ್ ತಯಾರಿಸಿ ಇವರೇ ಮಾರುತ್ತಿದ್ದರು. ಬಂದ ಹಣದಲ್ಲಿ ಅಪ್ರಾಪ್ತರಿಗೆ ೫ ರಿಂದ ೬ ಸಾವಿರ ನೀಡುತ್ತಿದ್ದ.