ಮಗನ ಹುಟ್ಟುಹಬ್ಬದಲ್ಲಿ ಹಾರಿದ ಗುಂಡು; ತಾಯಿ ಸ್ಥಳದಲ್ಲೇ ಸಾವು
ಲಖಿಂಪುರ್ ಖೇರಿ: ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ತಾಯಿ ಆಕಸ್ಮಿಕವಾಗಿ ಸಿಡಿದ ಗುಂಡಿಗೆ ಬಲಿಯಾಗಿರುವ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ. ಅನಿತಾ ವರ್ಮಾ ಎಂಬುವವರು ತಮ್ಮ ಮಗನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದಿದ್ದು, ೨೮ ವರ್ಷದ ಅನಿತಾ ವರ್ಮಾ ಸಾವನ್ನಪ್ಪಿದ್ದಾರೆ.
ಅನಿತಾ ವರ್ಮಾ ಅವರು ಪ್ರದೀಪ್ ವರ್ಮಾ ಎಂಬ ರೈತನ ಪತ್ನಿಯಾಗಿದ್ದಾರೆ. ಅವರು ತಮ್ಮ ಮೂರು ವರ್ಷದ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಯೋಜಿಸಿದ್ದರು. ಈ ಸಂಭ್ರದಲ್ಲಿದ್ದಾಗ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಈ ದುರ್ಘಟನೆ ನಡೆದಿದೆ.