CrimeInternational

ಮದುವೆ ಮಂಟಪದಲ್ಲಿ ಭೀಕರ ಅಗ್ನಿ ದುರಂತ; 100ಕ್ಕೂ ಹೆಚ್ಚು ಮಂದಿ ದುರ್ಮರಣ

ಬಾಗ್ದಾದ್; ಉತ್ತರ ಇರಾಕ್‌ನ ನಿನೆವೆ ಪ್ರಾಂತ್ಯದಲ್ಲಿ ಬರುವ ಹಮ್ದಾನಿಯಾದ ಮದುವೆ ಮಂಟಪವೊಂದರಲ್ಲಿ ಭೀಕರ ಅಗ್ನಿ ದುರಂರ ಸಂಭವಿಸಿದ್ದು, ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಸುಟ್ಟು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಗ್ನಿ ಪ್ರಮಾದಕ್ಕೆ ಅಸಲಿ ಕಾರಣ ಇನ್ನೂ ತಿಳಿದುಬಂದಿಲ್ಲ. ಆದ್ರೆ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಈ ವೇಳೆ ಬೆಂಕಿ ಕಿಡಿ ಹಾರಿ ಬೆಂಕಿ ಎಲ್ಲೆಡೆ ವ್ಯಾಪಿಸಿರಬಹುದು ಎಂದು ಹೇಳಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

 

Share Post