ಅಂದು ಸುಗ್ರೀವಾಜ್ಞೆ ತಡೆಯದಿದ್ದಿದ್ದರೆ ಇಂದು ರಾಹುಲ್ ಬಚಾವ್ ಆಗುತ್ತಿದ್ದರು..!
ನವದೆಹಲಿ; ಎರಡು ವರ್ಷ ಜೈಲು ಶಿಕ್ಷೆ ಆಗಿದ್ದರಿಂದಾಗಿ ರಾಹುಲ್ ಗಾಂಧಿಯವರು ಸಂಸತ್ ಸದಸ್ಯತ್ವ ಕಳೆದುಕೊಂಡಿದ್ದಾರೆ. ಜನಪ್ರನಿಧಿಗಳ ಕಾನೂನಿನ ಪ್ರಕಾರ ಅವರು ಈಗ ಅನರ್ಹಗೊಂಡಿದ್ದಾರೆ. ಅಂದಹಾಗೆ ಹತ್ತು ವರ್ಷದ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ವಿರೋಧಿಸದೇ ಇದ್ದಿದ್ದರೆ ಇಂದು ರಾಹುಲ್ ಸದಸ್ಯತ್ವ ಉಳಿಯುತ್ತಿತ್ತು. ಯಾಕಂದ್ರೆ ಜೈಲು ಶಿಕ್ಷೆಗೆ ಗುರಿಯಾಗುವ ಜನಪ್ರತಿನಿಧಿಗಳನ್ನು ತಕ್ಷಣವೇ ಅಮಾನತು ಮಾಡುವುದರಿಂದ ರಕ್ಷಿಸಲು ಅಂದು ಮನಮೋಹನ್ ಸಿಂಗ್ ಸರ್ಕಾರ ಸುಗ್ರೀವಾಜ್ಞೆ ತಂದಿತ್ತು.
೨೦೧೩ರಲ್ಲಿ ಜನಪ್ರತಿನಿಧಿ ಕಾಯ್ದೆಯಲ್ಲಿ ಸೆಕ್ಷನ್ 8 (4)ರ ಅಡಿ ಶಿಕ್ಷೆಗೊಳಗಾಗ ಜನಪ್ರತಿನಿಧಿಗಳಿಗೆ ಮೂರು ತಿಂಗಳ ಕಾಲ ರಕ್ಷಣೆ ಮಾಡುವ ಉದ್ದೇಶದಿಂದ ೨೦೧೩ರಲ್ಲಿ ಆಗಿನ ಸರ್ಕಾರ ಸುಗ್ರೀವಾಜ್ಞೆ ತಂದಿತ್ತು. ಆದ್ರೆ ಅದೇ ಸರ್ಕಾರದ ಭಾಗವಾಗಿದ್ದ ರಾಹುಲ್ ಗಾಂಧಿ ಅಂದು ಇದನ್ನು ವಿರೋಧಿಸಿದ್ದರು. 2013ರ ಸೆಪ್ಟೆಂಬರ್ 28ರಂದು ಈ ಬಗ್ಗೆ ಹಿರಿಯ ನಾಯಕ ಅಜಯ್ ಮಾಕೆನ್ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಅಲ್ಲಿಗೇ ಬಂದ ರಾಹುಲ್ ಗಾಂಧಿ, ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದು ಸಂಪೂರ್ಣ ಅಸಂಬದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದಾದ ಮೇಲೆ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆಯಲಾಗಿತ್ತು.