CinemaCrime

ತವರಿಗೆ ಹೋದ ಪತ್ನಿ ಮೇಲೆ ಗುಂಡು ಹಾರಿಸಿದ ಪತಿ

ಚಿಕ್ಕೋಡಿ; ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ತವರು ಮನೆ ಸೇರಿದ್ದ ಪತ್ನಿ ಮೇಲೆ ಗಂಡನೇ ಫೈರಿಂಗ್‌ ಮಾಡಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಆರೋಪಿ ಶಿವಾನಂದನನ್ನು ಪೊಲೀಸರು ಬಂಧಿಸಿದ್ದಾರೆ. ಶಿವಾನಂದ ಪತ್ನಿಯ ತವರಿಗೆ ಬಂದು ಹೆಂಡತಿಯ ಮೇಲೆ ಗುಂಡು ಹಾರಿಸಿ ಕೊಲ್ಲುವುದಾಗಿ ಧಮ್ಕಿ ಹಾಕಿದ್ದಾನೆ. ಅಲ್ಲದೆ ರಿವಾಲ್ವಾರ್‌ ತೆಗೆದು ಫೈರ್‌ ಮಾಡಿದ್ದಾನೆ. ಆದ್ರೆ ಪತ್ನಿ ಪ್ರೀತಿ ಇದರಿಂದ ತಪ್ಪಿಸಿಕೊಂಡು ಬಚಾವಾಗಿದ್ದಾಳೆ.

ಶಿವಾನಂದ ಹಾಗೂ ಪ್ರೀತಿ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇದೀಗ ಶಿವಾನಂದ್ ಪರಸ್ತ್ರೀ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನೆ ಮಾಡಿ ಪ್ರೀತಿ ತವರು ಮನೆ ಸೇರಿದ್ದಳು. ಬೆಳಗಾವಿ ಜಿಲ್ಲೆಯ ಅಥಣಿಗೆ ಬಂದು ತನ್ನ ತಾಯಿಯೊಂದಿಗೆ ವಾಸವಿದ್ದಳು.

Share Post