CrimeNational

ಮೊಬೈಲ್‌ ಚಾರ್ಜಿಗಿಟ್ಟು ಮಾತನಾಡುತ್ತಿದ್ದಾಗ ಸ್ಫೋಟ; ಮಹಿಳೆ ಸಾವು!

ಚೆನ್ನೈ; ಮೊಬೈಲ್‌ ಚಾರ್ಜ್‌ ಮಾಡುವಾಗ ಮಾತನಾಡಬಾರದು ಅಂತ ಎಲ್ಲರಿಗೂ ಗೊತ್ತಿದೆ. ಆದರೂ ಜನರು ಮೊಬೈಲ್‌ಗೆ ಅಡಿಕ್ಟ್‌ ಆಗಿರೋದ್ರಿಂದ ಚಾರ್ಜ್‌ ಆಗ್ತಿರುವಾಗಲೂ ಮೊಬೈಲ್‌ ಬಳಸುತ್ತಾರೆ. ಇದರಿಂದ ಆಗಾಗ ಅನಾಹುತಗಳಾಗುತ್ತಿರುತ್ತವೆ. ತಮಿಳುನಾಡಿನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ.

ತಂಜಾವೂರು ಜಿಲ್ಲೆಯ ಪಾಪನಾಶಂ ಸಮೀಪದ ವಿಶಿಷ್ಟರಾಜಪುರಂನ 33 ವರ್ಷ ಕೊಕಿಲಾಂಪಾಲ್‌ ಎಂಬಾಕೆಯೇ ಸಾವನ್ನಪ್ಪಿದ ಮಹಿಳೆ. ಈಕೆಗೆ ಮದುವೆಯಾಗಿ ಒಂದು ಗಂಡು ಮಗುವಿದ್ದು, ಪತಿ ಅನಾರೋಗ್ಯದಿಂದ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ. ಮಗನ ಜೊತೆ ವಾಸವಿದ್ದ ಈಕೆ, ಮೊಬೈಲ್‌ ಚಾರ್ಜ್‌ಗೆ ಹಾಕಿಕೊಂಡೇ ಮಾತನಾಡುತ್ತಿದ್ದಳು. ಈ ವೇಳೆ ಮೊಬೈಲ್‌ ಸ್ಪೋಟಗೊಂಡಿದ್ದು, ಮಹಿಳೆ ಸಾವನ್ನಪ್ಪಿದ್ದಾಳೆ.

 

Share Post