BengaluruCrime

ದರ್ಶನ್‌ ಅಂಡ್‌ ಗ್ಯಾಂಗ್‌ ಇಂದೇ ಕೋರ್ಟ್‌ಗೆ ಹಾಜರು; ಪರಪ್ಪನ ಅಗ್ರಹಾರ ಸೇರುವ ಸಾಧ್ಯತೆ

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪೊಲೀಸ್‌ ಕಸ್ಟಡಿ ನಾಳೆಗೆ ಮುಕ್ತಾಯವಾಗಲಿದೆ.. ಆದ್ರೆ ನಾಳೆ ಭಾನುವಾರವಾದ್ದರಿಂದ ಇವತ್ತೇ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.. ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿ ಎಲ್ಲರನ್ನೂ ಜೈಲಿಗೆ ಕಳುಹಿಸುವ ಸಾಧ್ಯತೆ ಇದೆ..

ಕೊಲೆ ಪ್ರಕರಣದ ಬಹುತೇಕ ತನಿಖೆ ಮುಗಿದಿದ್ದು, ಎಲ್ಲಾ ಆರೋಪಿಗಳಿಂದ ಸ್ವ ಇಚ್ಛಾ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.. ಇನ್ನು ಕೃತ್ಯಕ್ಕೆ ಬಳಸಿದ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.. ಸ್ಥಳ ಮಹಜರು ಕೂಡಾ ಮುಗಿದಿದೆ.. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಇಂದೇ ಕೋರ್ಟ್‌ಗೆ ಹಾಜರುಪಡಿಸುವ ಎಲ್ಲಾ ಸಾಧ್ಯತೆ ಇದೆ..

ಇನ್ನು ಆರೋಪಿಗಳಿಗೆ ಜಾಮೀನು ನೀಡದಂತೆ ಪೊಲೀಸರು ಕೋರ್ಟ್‌ಗೆ ಮನವಿ ಮಾಡಲಿದ್ದಾರೆ.. ಪ್ರಕರಣದ ಎ೨ ಆರೋಪಿ ದರ್ಶನ್‌ ಸೇರಿ ಹಲವರು ಪ್ರಭಾವಿಗಳಾಗಿದ್ದಾರೆ.. ಅವರನ್ನು ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಮಾಡುವ ಹಾಗೂ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವಾದ ಮಂಡಿಸುವ ಸಾಧ್ಯತೆ ಇದೆ.. ಹೀಗಾಗಿ ಇಡೀ ತಂಡ ಪರಪ್ಪನ ಅಗ್ರಹಾರ ಜೈಲು ಸೇರುವುದು ಬಹುತೇಕ ಪಕ್ಕಾ ಆಗಿದೆ..

 

Share Post