ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮುಗ್ಧ ಜೀವ ಬಲಿ: ದುರಂತ ಬಳಿಕ ಎಚ್ಚೆತ್ತ ಪಾಲಿಕೆ ಕ್ಲೀನಿಂಗ್ ಕಾರ್ಯ
ಬೆಂಗಳೂರು: ಬಿಬಿಎಂಪಿ ಯಡವಟ್ಟುಗಳು ಒಂದಾ..ಎರಡಾ..ಪಾಲಿಕೆ ನಿರ್ಲಕ್ಷ್ಯಕ್ಕೆ ಅದೆಷ್ಟು ಅಮಾಯಕ ಜೀವಗಳು ಬಲಿಯಾಗಿದ್ದಾವೊ..?ಇದೀಗ ಮತ್ತದೆ ಘಟನೆ ಮರುಕಳಿಸಿದೆ. ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ಪುಟ್ಟ ಬಾಲಕಿಗೆ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ಮುಂಭಾಗ ನಡೆದಿದೆ.
ರಸ್ತೆ ದಾಟಲು ಮಹಿಳೆ, ಬಾಲಕಿ ಸೇರಿದಂತೆ ಪ್ರಯತ್ನಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಕಾರುಮ ಬೈಕ್ಗಳನ್ನು ತಡೆಯೊಡ್ಡಿ ರಸ್ತಾ ದಾಟುವಾಗ ಹಿಂದಿನಿಂದ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಬೈಕ್, ಆಟೋ, ಕಾರು ಸೇರಿದಂತೆ ಬಾಲಕಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ 13ವರ್ಷದ ಬಾಲಕಿ ಸ್ಥಳದಲ್ಲೇ ಅಸುನೀಗಿದ್ದಾಳೆ. ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೆಬ್ಬಾಳ ಬಳಿ ಅಂಡರ್ಪಾಸ್ ಇದ್ರೂ ಇವರು ರಸ್ತೆ ಮೇಲೆ ಯಾಕೆ ಬಂದ್ರೂ ಎಂದು ಹಲವರ ಪ್ರಶ್ನೆಯಾಗಿದೆ. ನಿನ್ನೆ ಮಳೆ ಬಂದು ಅಂಡರ್ಪಾಸ್ ಪೂರ್ತಿಯಾಗಿ ನೀರಿನಿಂದ ತುಂಬಿದೆ. ಹಾಗಾಗಿ ಅಲ್ಲಿಂದ ಬರಲಾಗದೆ ರಸ್ತೆ ದಾಟಲು ಪ್ರಯತ್ನಿಸಿದ್ದಾರೆ. ಈ ವೇಳೆ ಅನಾಹುತ ನಡೆದುಹೋಗಿದೆ.
ದುರಂತ ನಡೆದ ಬಳಿಕ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದ್ರು ಎಂಬ ಗಾದೆಯಂತೆ, ಬಾಲಕಿ ಸಾವನ್ನಪ್ಪಿದ ಬಳಿಕ ಈಗ ಅಂಡರ್ಪಾಸ್ನಲ್ಲಿರುವ ನೀರನ್ನು ಎತ್ತುವ ಕೆಲಸ ಮಾಡ್ತಿದಾರೆ. ಈ ಕೆಲಸ ಬೆಳಗ್ಗೆಯೇ ಮಾಡಿದ್ರೆ ಇಂದು ಒಂದು ಮುಗ್ದ ಜೀವ ಹೋಗುವುದನ್ನು ತಪ್ಪಿಸಬಹುದಿತ್ತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಅಮಅಯಕರ ಜೀವ ಬಲಿಯಾಗಬೇಕೋ..ಏನೋ..?