CrimeNational

ಹಳಿ ಮತ್ತೊಂದು ರೈಲು; ಎಲ್‌ಪಿಜಿ ಗೂಡ್ಸ್‌ ರೈಲು ಅವಘಡ

ಜಬಲ್‌ಪುರ್‌; ಒಡಿಶಾದಲ್ಲಿ ರೈಲು ದುರಂತದ ನಂತರದ ರೈಲು ಅವಘಡಗಳು ನಡೆಯುತ್ತವೇ ಇವೆ. ಇಂದು ಮಧ್ಯಪ್ರದೇಶದಲ್ಲಿ ಗೂಡ್ಸ್‌ ರೈಲೊಂದು ಹಳಿ ತಪ್ಪಿದೆ. ಅದೃಷ್ಟವಶಾತ್‌ ಯಾವುದೇ ಅನಾಹುತ ನಡೆದಿಲ್ಲ. ಜಬಲ್‌ಪುರ ಜಿಲ್ಲೆಯ ಶಹಪುರ ಭಿಟೋನಿ ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದೆ.

ಎಲ್‌ಪಿಜಿ ಗ್ಯಾಸ್‌ ತುಂಬಿದ್ದ ರೈಲು ಇದಾಗಿದ್ದು, ಎರಡು ವ್ಯಾಗನ್‌ಗಳ ಎಲ್‌ಪಿಜಿ ರೇಕ್‌ಗಳು ಹಳಿ ತಪ್ಪಿವೆ. ತಡರಾತ್ರಿ ಈ ಘಟನೆ ನಡೆದಿದೆ. ಗ್ಯಾಸ್ ಫ್ಯಾಕ್ಟರಿಯೊಂದರಲ್ಲಿ ರೇಕ್‌ಗಳನ್ನು ಖಾಲಿ ಮಾಡಲು ಹೋದಾಗ ಗೂಡ್ಸ್ ರೈಲಿನಿಂದ ಎರಡು ವ್ಯಾಗನ್‌ಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post