CrimeNational

ವಿಮಾನಕ್ಕೆ ಹಕ್ಕಿ ಡಿಕ್ಕಿ; ಅದೃಷ್ಟವಶಾತ್‌ ತಪ್ಪಿತು ಭಾರಿ ಅನಾಹುತ

ನವದೆಹಲಿ; ಆಕಾಶ್‌ ಏರ್‌ ಎಂಬ ಖಾಸಗಿ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್‌ ಭಾರಿ ಅನಾಹುತ ತಪ್ಪಿದೆ. ಹಕ್ಕಿ ಡಿಕ್ಕಿ ಹೊಡೆದಿದ್ದರಿಂದ ವಿಮಾನದ ಮೂತಿಗೆ ಕೊಂಚ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ವಿಮಾನ ಅಹಮದಾಬಾದ್‌ನಿಂದ ದೆಹಲಿಗೆ ಬರುತ್ತಿತ್ತು. ಈ ವೇಳೆ ಹಕ್ಕಿ ಡಿಕ್ಕಿ ಹೊಡೆದಿದೆ. ಆದ್ರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆದ ಮೇಲೆ ಈ ವಿಷಯ ಗೊತ್ತಾಗಿದೆ.

Share Post