ಭೋಪಾಲ್‌ನಲ್ಲಿ ಭೀಕರ ಅಪಘಾತ; ಅಪಹರಣಗೊಂಡ ಬಾಲಕಿ ರಕ್ಷಿಸುವಾಗ ದುರಂತ-5 ಸಾವು
ಭೋಪಾಲ್: ಅಪಹರಣಕ್ಕೊಳಗಾಗಿದ್ದ ಬಾಲಕಿಯನ್ನು ರಕ್ಷಿಸಲು ತೆರಳುತ್ತಿದ್ದ ಪೊಲೀಸರ ವಾಹನ ಅಪಘಾತಕ್ಕೀಡಾಗಿ ಮೂವರು ಪೊಲೀಸರು ಸೇರಿ ಐವರು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರ ಪ್ರದೇಶದ ಮಥುರಾ ಸಮೀಪ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಪೊಲೀಸರು ಮಧ್ಯಪ್ರದೇಶದ ಟಿಕಾಮ್‌ಗಡದ ಬುದೇರಾ ಪೊಲೀಸ್ ಠಾಣೆಗೆ ಸೇರಿದವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಸೇರಿ ಮೂವರು ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಮಥುರಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ತಂಡ ಹರಿಯಾಣಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ವಿಭಜಕಕ್ಕೆ ವಾಹನ ಡಿಕ್ಕಿ ಹೊಡೆದಿದೆ. ಮೃತರನ್ನು ಹೆಡ್‌ಕಾನ್ಸ್‌ಟೇಬಲ್ ಭವಾನಿ ಪ್ರಸಾದ್ (52), ಕಾನ್ಸ್‌ಟೇಬಲ್‌ಗಳಾದ ಹೀರಾ ದೇವಿ ಪ್ರಜಾಪತಿ (32), ಕಮಲೇಂದ್ರ ಯಾದವ್ (28) ಎಂದು ಗುರುತಿಸಲಾಗಿದೆ.