CrimeDistricts

ಟ್ರ್ಯಾಕ್ಟರ್ ಗೆ ಬಸ್ ಡಿಕ್ಕಿ; 4 ಮಂದಿ ಸಾವು, 9 ಮಂದಿ ಗಂಭೀರ

ಕೊಪ್ಪಳ; ಓವರ್ ಟೇಕ್ ಮಾಡುವ ಭರದಲ್ಲಿ ಬಸ್ಸೊಂದು ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದ್ದು, ದುರ್ಘಟನೆಯಲ್ಲಿ 4 ಮಂದಿ ಗಾಯಗೊಂಡಿದ್ದಾರೆ.. 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

  ಕೊಪ್ಪಳದ ಹೊಸಲಿಂಗಾಪುರ ಬಳಿ ಈ ಭೀಕರ ಅಪಘಾತ ನಡೆದಿದೆ.. ಮೃತಪಟ್ಟವರು ಹಾಗೂ ಗಾಯಾಳುಗಳು ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ..

  ಮೃತರೆಲ್ಲರೂ ಯಲಬುರ್ಗಾದ ಕರಮುಡಿ ಮೂಲದವರು ಎಂದು ತಿಳಿದುಬಂದಿದೆ.. ಎಲ್ಲರೂ ಯಲಬುರ್ಗಾದಿಂದ ಹುಲಿಗಿ ದರ್ಶನಕ್ಕೆ ಹೋಗಿದ್ದರು. ಟ್ರ್ಯಾಕ್ಟರ್ ನಲ್ಲಿ ವಾಪಸ್ ಹೋಗುವಾಗ ಬಸ್ ಓವರ್ ಟೇಕ್ ಮಾಡಲು ಹೋಗಿದೆ.. ಈ ವೇಳೆ ಟ್ರ್ಯಾಕ್ಟರ್ ಟ್ರಾಲಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ದುರಂತ ನಡೆದಿದೆ..

   ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಸುಮಾರು 9 ಜನರಿಗೆ ಗಂಭೀರ ಗಾಯಗಳಾಗಿವೆ.

Share Post