CrimeNational

ಇನ್ಸ್ಟಾ ಲೈವ್ ಮಾಡಲು ಹೋಗಿ ಅಪಘಾತ; ನಾಲ್ವರು ಯುವಕರ ದುರ್ಮರಣ

ಗುಜರಾತ್; ಇನ್ಸ್ಟಾಗ್ರಾಂನಲ್ಲಿ ಲೈವ್ ಮಾಡಲು ವೇಗವಾಗಿ ಕಾರು ಓಡಿಸಲು ಹೋಗಿ ಅಪಘಾತಕ್ಕೀಡಾಗಿ ನಾಲ್ವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.. ಗುಜರಾತ್ ನ ವಸಾದ್ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ..

  ಲೈವ್ ಬಂದು ಕಾರನ್ನು ವೇಗವಾಗಿ ಓಡಿಸಿದ್ದಾರೆ. ಈ ವೇಳೆ ಕಾರು ನಿಯಂತ್ರಣ ತಪ್ಪಿದೆ.. ಇದರಿಂದಾಗಿ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ನೇಹಿತರು ಸಾವನ್ನಪ್ಪಿದ್ದಾರೆ..

 ಸಾಮಾಜಿಕ ಜಾಲತಾಣದಲ್ಲಿ ಯುವಕರು ವೇಗವಾಗಿ ಕಾರು ಚಲಾಯಿಸುವ ಇನ್​ಸ್ಟಾಗ್ರಾಂ ಲೈವ್​ ದೃಶ್ಯ ವೈರಲ್​ ಆಗಿದೆ. ದೃಶ್ಯದಲ್ಲಿ ಯುವಕರು ಎಂಜಾಯ್​​ ಮಾಡುವುದನ್ನು ಕಾಣಬಹುದಾಗಿದೆ. ಜೊತೆಗೆ ಕಾರಿನ ಮೀಟರ್ ​140 ಕಿಮೀನಲ್ಲಿ ಇರುವುದು ಕಾಣಬಹುದಾಗಿದೆ.

Share Post