CrimeNational

6 ವರ್ಷದ ಬಾಲಕಿ ಮೇಲೆ ಏಕಾಏಕಿ ದಾಳಿ ಮಾಡಿದ ಸಾಕು ನಾಯಿ!

ಲಕ್ನೋ; ವಾಕಿಂಗ್‌ ಮಾಡುತ್ತಿರುವಾಗ ನಾಯಿಯೊಂದು ಆರು ವರ್ಷದ ಮಗುವಿನ ಮೇಲೆ ದಾಳಿ ಮಾಡಿದೆ.. ಸೈಕಲ್‌ ಮೇಲೆ ಕುಳಿತಿದ್ದ ಮಗುವಿನೆ ಮೇಲೆ ಸಾಕು ನಾಯಿ ದಾಳಿ ಮಾಡಿದ್ದು, ಇದನ್ನು ನೋಡಿದ ಮಗುವಿನ ತಾಯಿ ಆತಂಕದಿಂದ ಓಡಿಬಂದಿದ್ದಾರೆ.. ನಾಯಿ ಮಾಲಕಿ ಆ ನಾಯಿಯನ್ನು ಹಿಡಿದೆಳೆದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ..

ಘಾಜಿಯಾಬಾದ್​​ನ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ನಾಯಿಯನ್ನು ಹೊರಗಡೆ ಕರೆತಂದಿದ್ದಾಗ ಆ ನಾಯಿ ಇದ್ದಕ್ಕಿದ್ದಂತೆ ಮಗುವಿನ ಮೇಲೆ ದಾಳಿ ಮಾಡಿದೆ..  ವನ್ಯಾ ಚೌಹಾನ್​ ಎಂಬ ಬಾಲಕಿ ಸೈಕಲ್‌ನಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದೆ..  ಜರ್ಮನ್ ಶೆಫರ್ಡ್ ತಳಿಯ ನಾಯಿ ದಾಳಿ ಮಾಡಿದ್ದು, ನಾಯಿಯನ್ನು ನಿಯಂತ್ರಿಸಲು ನಾಯಿಯ ಮಾಲಕಿ ಹರಸಾಹಸಪಟ್ಟಿದ್ದಾರೆ.

ನಾಯಿ ದಾಳಿಗೆ ಒಳಗಾದ ಬಾಲಕಿಗೆ ಕೈಗೆ ಹಾಗೂ ಸೊಂಟದ ಭಾಗದಲ್ಲಿ ಗಾಯಗಳಾಗಿವೆ. ಕೂಡಲೇ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ.

 

Share Post