BengaluruCrime

ಹುಡುಗಿಯರ ಮುಂದೆ ಜಿಪ್‌ ತೆಗೆದು ಗುಪ್ತಾಂಗ ತೋರಿಸಿದ ಕಾಮುಕ!

ಬೆಂಗಳೂರು; ಸ್ಕೂಟರ್‌ ಮೇಲೆ ಹೋಗುತ್ತಿದ್ದ ಕಾಮುಕ ವ್ಯಕ್ತಿಯೊಬ್ಬ ಟ್ರಾಫಿಕ್ಸ್‌ ನಲ್ಲಿ ಹುಡುಗಿಯರ ಮುಂದೆಯೇ ಪ್ಯಾಂಟ್‌ ಜಿಪ್‌ ತೆಗೆದು ಗುಪ್ತಾಂಗ ತೋರಿಸಿ ಅಸಹ್ಯ ಪ್ರದರ್ಶನ ಮಾಡಿದ್ದಾನೆ.. ಬೆಂಗಳೂರಿನ ವಿವಿ ಪುರಂನಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ ಮುಂದೆಯೇ ಈ ಘಟನೆ ನಡೆದಿದೆ..

ಕಾಲೇಜು ಮುಭಾಗ ಒಂದಷ್ಟು ಹುಡುಗಿಯರು ನಿಂತಿದ್ದರು.. ಈ ವೇಳೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿ ಪ್ಯಾಂಟ್‌ ಜಿಪ್‌ ತೆಗೆದು ಗುಪ್ತಾಂಗ ಪ್ರದರ್ಶನ ಮಾಡಿದ್ದಾನೆ.. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ.. ಅವರ ಅಸಹ್ಯವನ್ನು ಯಾರೂ ಚಿತ್ರೀಕರಿಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ.. ಬೆಂಗಳೂರು ಪೊಲೀಸರಿಗೂ ಟ್ಯಾಗ್‌ ಮಾಡಲಾಗಿದೆ..

ಸ್ಕೂಟರ್‌ನ ನಂಬರ್‌ ಸರಿಯಾಗಿ ಕಾಣಿಸಿಲ್ಲ.. ಯಾಕಂದ್ರೆ, ಅದ್ರಲ್ಲಿ ಎರಡು ನಂಬರ್‌ ಅನ್ನು ಆತ ಮುಚ್ಚಿದ್ದಾನೆ.. ಹೀಗಾಗಿ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ..

 

Share Post