Crime

ನೆಲಮಂಗಲದಲ್ಲಿ ಗಾಂಜಾ ಪೆಡ್ಲರ್‌ಗಳ ಬಂಧನ : 53ಕೆಜಿ ಗಾಂಜಾ ವಶ

ನೆಲಮಂಗಲ : ಹೊರ ರಾಜ್ಯದಿಂದ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್‌ಗಳನ್ನು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಸೆರೆಹಿಡಿದಿದ್ದಾರೆ. ಬೆಂಗಳೂರಿನ ಹೊರವಲಯದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಬಳಿ ಈ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಉಮೇಶ್‌ ಮತ್ತು ರಾಮ್‌ ಪ್ರಸಾದ್‌ ಎಂಬುವವರು ಗಾಂಜಾ ಪೆಡ್ಲರ್‌ಗಳಾಗಿದ್ದರು. ಉಮೇಶ್‌ ಕುಲುವನಹಳ್ಳಿ ಮೂಲದವರು, ರಾಮ್‌ ಪ್ರಸಾದ್‌ ಗೋದಾವರಿಯವರು ಎಂದು ತಿಳಿದು ಬಂದಿದೆ. ಇನ್ನು ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿಯೊಂದಿಗೆ ದಾಳಿಮಾಡಿದ ಪೊಲೀಸರು 15.90 ಲಕ್ಷ ಮೌಲ್ಯದ 53 ಕೆ.ಜಿ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳು ಬಳಸುತ್ತಿದ್ದ ಮೊಬೈಲ್‌ ಮತ್ತು ಮಾರುತಿ 800 ಕಾರನ್ನು ವಶಪಡಿಸಿಕೊಂಡಿದ್ದಾರೆ,

ಒಂದು ವಾರದಿಂದ ಕಾರ್ಯಚರಣೆಯಲ್ಲಿ ನಿರತರಾಗಿದ್ದ ಪೊಲೀಸರು ಈಗ ಯಶಸ್ವಿಯಾಗಿದ್ದಾರೆ. ಆಂಧ್ರದಿಂದ ಗಾಂಜಾ ತಂದು ಬೆಂಗಳೂರು, ನೆಲಮಂಗಲ, ತುಮಕೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Share Post