CrimeNational

ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನಾ ಸಿಬ್ಬಂದಿ

ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ಸಿದ್ರಾ ಎಂಬಲ್ಲಿ ಭಾರತೀಯ ಯೋಧರು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಸೇನಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದ, ಟ್ರಕ್‌ನಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಕೊಲ್ಲುವಲ್ಲಿ ಸೇನೆ ಯಶಸ್ವಿಯಾಗಿದೆ.

ಟ್ರಕ್​ನಲ್ಲಿದ್ದ ಮೂವರೂ ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಧಮ್‌ಪುರ ಜಿಲ್ಲೆಯಲ್ಲಿ ನಿನ್ನೆ 15 ಕೆಜಿ ಐಇಡಿಯನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದರು. ಇದಾದ ಒಂದು ದಿನದಲ್ಲೇ ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಮೂಲಕ ಸೇನಾ ಪಡೆ ಸಿದ್ರಾದಲ್ಲಿ ಪ್ರಮುಖ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದೆ. ಬಸಂತ್‌ಗಢ ಪ್ರದೇಶದಲ್ಲಿ ಸಿಲಿಂಡರ್ ಆಕಾರದ ಐಇಡಿ, 300-400 ಗ್ರಾಂ ಆರ್‌ಡಿಎಕ್ಸ್, 7 7.62 ಎಂಎಂ ಕಾರ್ಟ್ರಿಡ್ಜ್‌ಗಳು ಮತ್ತು 5 ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post