ಪುತ್ರಿ ಐಶ್ವರ್ಯಾ ಜೊತೆ ತಿಮ್ಮಮ್ಮ ದರ್ಶನ ಪಡೆದ ರಜಿನಿಕಾಂತ್
ತಿರುಮಲ; ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಇಂದು ತಮ್ಮ ಪುತ್ರಿ ಐಶ್ವರ್ಯಾ ಜೊತೆ ತಿರುಪತಿಗೆ ಭೇಟಿ ನೀಡಿದ್ದರು. ಸುಪ್ರಭಾತ ಸೇವೆ ವೇಳೆ ರಜಿನಿಕಾಂತ್ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಪ್ರತಿದಿನ ಬೆಳಗ್ಗೆ ತಿಮ್ಮಪ್ಪನಿಗೆ ಸುಪ್ರಭಾತ ಸೇವೆ ನಡೆಯುತ್ತದೆ. ಈ ವೇಳೆ ಸ್ಪೆಷಲ್ ಟಿಕೆಟ್ ಪಡೆದಿರುವವರು ಹಾಗೂ ವಿವಿಐಪಿಗಳಿಗೆ ದರ್ಶನ ವ್ಯವಸ್ಥೆ ಇರುತ್ತದೆ.
ಇಂದು ಮುಂಜಾನೆಯೇ ತಿರುಪತಿಗೆ ಆಗಮಿಸಿದ ರಜಿನಿಕಾಂತ್ ಹಾಗೂ ಪುತ್ರಿ ಐಶ್ವರ್ಯಾ, ಸಾಂಪ್ರದಾಯಿಕ ಉಡುಗೆ ಧರಿಸಿ, ತಿಮ್ಮಪ್ಪ ದರ್ಶನ ಮಾಡಿದರು.